ಬೆಂಗಳೂರು: ‘ಜನತಾ ಪತ್ರಿಕೆ ಪಕ್ಷದ ಮುಖವಾಣಿ ಅಲ್ಲ. ಜಯಪ್ರಕಾಶ ನಾರಾಯಣ್ ಅವರ ಸ್ವಾತಂತ್ರ್ಯ ಹೋರಾಟದ ಪ್ರತೀಕ‘ ಎಂದು ಜೆಡಿಎಸ್ ಶಾಸಕಾಖಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಪಿ. ರಾಮಯ್ಯ ಅವರು ಜೆಡಿಎಸ್‌ನ ಮಾಸಪತ್ರಿಕೆ 'ಜನತಾ ಪತ್ರಿಕೆ' ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಈ ಪತ್ರಿಕೆ ಜನತಾದಳದ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಪಕ್ಷದ ಅಭಿಮಾನಿಗಳಿಗಷ್ಟೇ ಸೀಮಿತ ಅಲ್ಲ. ಪತ್ರಿಕೆಯ ಮೂಲಕ ಕೇಂದ್ರ ಸರ್ಕಾರದ ನೀತಿಗಳು, ರಾಜ್ಯದ ಸಣ್ಣ ಹಳ್ಳಿಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಉದ್ದೇಶ’ ಎಂದರು.

‘ಟೀಕೆಗಳಿಗಷ್ಟೆ ಸೀಮಿತವಾಗುವ ಮಾಸ ಪತ್ರಿಕೆ ಅಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲೋಪಗಳನ್ನು ಪತ್ರಿಕೆ ಮೂಲಕ ಎತ್ತಿ ತೋರಿಸುತ್ತೇವೆ’ ಎಂದೂ ಹೇಳಿದರು.

‘ಉಪ ಚುನಾವಣೆ ಏಳು ಬೀಳುಗಳೇ ಬೇರೆ. ಸಾರ್ವತ್ರಿಕ ಚುನಾವಣೆಗಳೇ ಬೇರೆ. ನಮ್ಮ ವೈಫಲ್ಯಗಳ ಬಗ್ಗೆ ನಾವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.. ಇನ್ನು ಮುಂದೆ ಯಾವುದೇ ವ್ಯಕ್ತಿ, ಸಂಘಟನೆ, ಯಾವುದೇ ಪಕ್ಷದ ನಡವಳಿಕೆಗಳ ಬಗ್ಗೆ ಮಾತನಾಡುವುದಿಲ್ಲ. ಯಾರೂ 100ಕ್ಕೆ 100ರಷ್ಟು ಸರಿ ಇರಲ್ಲ. ಎಲ್ಲವೂ ಕಾಲ ಕಾಲಕ್ಕೆ ಬದಲಾಗಿರುತ್ತದೆ’ ಎಂದರು.

‘ಮೇಕೆದಾಟು ಯೋಜನೆ ಆರಂಭಿಸುವಂತೆ ಒತ್ತಾಯಿಸಲು ಎರಡು ತಿಂಗಳ ಹಿಂದೆ ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ನಾವು ಪ್ರಸ್ತಾಪ ಮಾಡಿದ್ದೆವು. ಮುಖ್ಯಮಂತ್ರಿ, ರಾಜ್ಯಪಾಲರನ್ನೂ ಭೇಟಿ ಮಾಡಿದ್ದೆವು. ಆದರೆ, ಕಾಂಗ್ರೆಸ್‌ನವರು ಪಾದಯಾತ್ರೆ ಘೋಷಣೆ ಮಾಡಿಯೇ ಬಿಟ್ಟರು. ಕಳೆದ ಬಾರಿ ಕಾಂಗ್ರೆಸ್ ನಡಿಗೆ ತುಂಗೆಯಡೆಗೆ ಎಂದು ಪಾದಯಾತ್ರೆ ಮಾಡಿದ್ದರು. ಅವರು ಏನೋ ಮಾಡುತ್ತಾರೆಂದು ನಾವೂ ಧುಮುಕಬೇಕಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.