ಬೆಳಗಾವಿ: ಗುರೂಜಿಶಿವಾನಂದ ವಾಲಿ ಎಂಬ ವ್ಯಕ್ತಿಯೊಬ್ಬರು, ವಿಚಿತ್ರ ಪೂಜೆ ಮತ್ತು ವಶೀಕರಣಗಳ ಮೂಲಕ ತಮ್ಮ ಪತ್ನಿ ಮತ್ತು ಆಕೆಯ ತಂದೆ ತಾಯಿಯನ್ನು ವಂಚಿಸಿ ಹಣ ಮತ್ತು ಆಸ್ತಿ ಕಬಳಿಸಿದ್ದಾರೆ ಎಂದು ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರು ಆರೋಪಿಸಿದ್ದಾರೆ.

ಈ ಕುರಿತು ಭಾನುವಾರಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ನಾನು ನನ್ನ ಪತ್ನಿ ಚೆನ್ನಾಗಿಯೇ ಇದ್ದೆವು. ನಮ್ಮ ಮನೆಗೆ ಗಂಗಾ ಕುಲಕರ್ಣಿ ಎಂಬುವವರು ಅಡುಗೆ ಕೆಲಸಕ್ಕೆ ಬಂದಾಗಿನಿಂದಲೂ ಸಮಸ್ಯೆಗಳು ಆರಂಭವಾದವು. ಅತ್ತೆಯ ಅಪೇಕ್ಷೆ ಮೇರೆಗೆ ಗಂಗಾ ಕೆಲಸಕ್ಕೆ ಬಂದಿದ್ದರು. ಅವರು ಬಂದ ಮೇಲೆ ಪತ್ನಿ ಮಂಕಾದಳು.

ಜನವರಿಯಲ್ಲಿ ಬೆಳಗಾವಿಗೆ ಬಂದ ಪತ್ನಿ ಮತ್ತು ಅತ್ತೆ ವಾಪಸ್ ಬರಲಿಲ್ಲ. ಜನವರಿ 10ರಿಂದ ಸಂಪರ್ಕಕ್ಕೂಸಿಗಲಿಲ್ಲ. ಹೀಗಾಗಿ ಕೆಲವು ದಿನಗಳ ನಂತರ ಬೆಳಗಾವಿಗೆ ಬಂದಿದ್ದೆ. ಆದರೆ ನಮ್ಮಅತ್ತೆ ಪತ್ನಿಯ ಮುಖ ನೋಡಲು ಅವರೊಂದಿಗೆ ಗಂಗಾ ಕುಲಕರ್ಣಿ ಕೂಡ ಇದ್ದರು. ವಿಚಿತ್ರವಾಗಿ ಪೂಜೆ ಮಾಡುತ್ತಿದ್ದರು ಎಂದು ಗೊತ್ತಾಯ್ತು. ಹೀಗಾಗಿ ವಾಪಸ್ ತೆರಳಿದೆ.

ನಂತರ ಅವರನ್ನು ಪದೇ ಪದೇ ಬಂದು ಹುಡುಕಿದೆ. ಮನೆಯೊಂದರಲ್ಲಿ ಜೂನ್ 5ರಂದು ಸಿಕ್ಕರು. ನನ್ನ ಪತ್ನಿಯ ಕೊರಳಲ್ಲಿ ಮಾಂಗಲ್ಯ, ಕಾಲುಂಗುರ ಇರಲಿಲ್ಲ. ಅದು ಇದ್ದರೆ ಮಾತ್ರ ಗಂಡ, ಹೆಂಡತಿನಾ ಅಂತ ಕೇಳಿದ್ದಳು. ಅತ್ತೆ ಆಕೆಯನ್ನು ಕರೆದುಕೊಂಡು ಹೋಗಿ ಕುಂಕುಮ ಹಚ್ಚಿಕೊಂಡು ಕರೆತಂದರು. ಅದಾದ ನಂತರ ನನ್ನನ್ನು ಪತ್ನಿ ಅಪರಿಚಿನಂತೆ ನೋಡಲು ಶುರು ಮಾಡಿದರು.

ಮನೆಗೆಲಸದಾಕೆ ಗಾಂಗಾ ಇಂದಲೇಶಿವಾನಂದ ವಾಲಿ ಪರಿಚಯವಾಗಿತ್ತು. ಅವರು ಪೂಜೆ, ವಶೀಕರಣಗಳ ಮೂಲಕ ಹಣ, ಆಸ್ತಿಯನ್ನು ಪಡೆದುಕೊಂಡು ವಂಚಿಸಿದ್ದಾರೆ ಎಂದು ಕಲ್ಯಾಣ್ ಹೇಳಿದ್ದಾರೆ.

ವಾಲಿ ಹೇಳುವ ಪೂಜೆಗಳಿಗಾಗಿ ನಮ್ಮ ಅತ್ತೆ (ಪತ್ನಿಯ ತಾಯಿ) ಸಂಬಂಧಿಕರ ಬಳಿ ಲಕ್ಷಗಟ್ಟಲೆ ಹಣ ಪಡೆದಿದ್ದರು. ಈ ವಿಷಯ ಸಂಬಂಧಿಕರಿಗೂ ಈಗ ತಿಳಿದಿದೆ. ಯಾರಾರಿಂದ ಹಣ ಪಡೆದಿದ್ದರೊ ಅದೆಲ್ಲವೂ ಶಿವಾನಂದ ವಾಲಿ ಅವರ ಹೆಸರಿಗೆ ವರ್ಗಾವಣೆ ಆಗಿದೆ. ಅಲ್ಲದೆ, ಬೆಳಗಾವಿಯಲ್ಲಿರುವ ನನ್ನ ಅತ್ತೆಯವರ ಆಸ್ತಿಯನ್ನೂ ವಾಲಿಗೆ ಬರೆದುಕೊಡಲಾಗಿದೆ ಎಂದು ಅವರು ದೂರಿದ್ದಾರೆ.

ಪತ್ನಿಗೆ ಮಾನಸಿಕವಾಗಿ, ದೈಹಿಕವಾಗಿ ತೊಂದರೆ ಕೊಟ್ಟಿದ್ದೇನೆ ಎಂಬ ಆರೋಪ ಸುಳ್ಳು. ಹಾಗಿದ್ದರೆ, 14 ವರ್ಷಗಳಿಂದ ಸುಮ್ಮನಿದ್ದದ್ದು ಏಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ನಾನು ಮತ್ತು ನನ್ನ ಪತ್ನಿಇಬ್ಬರೂ ಶೀಘ್ರದಲ್ಲೇಒಂದಾಗುತ್ತೇವೆ ಎಂಬ ವಿಶ್ವಾಸವಿದೆ ಎಂದೂ ಕಲ್ಯಾಣ್ ಹೇಳಿದ್ದಾರೆ.

ಹಾಡು ಸಂಯೋಜಿಸಿ ಜೊತೆಯಲ್ಲೇ ಪ್ರಸ್ತುತಪಡಿಸುತ್ತೇವೆ: ಕೆ. ಕಲ್ಯಾಣ್
ಬೆಳಗಾವಿ: ನನ್ನ ಪತ್ನಿ ಗಾಯಕಿ. ನಾನು ಹಾಗೂ ಆಕೆ ಗೀತೆ ರಚಿಸಿ, ಸಂಯೋಜಿಸಿ ಬೆಳಗಾವಿಯಲ್ಲೇ ಪತ್ರಿಕಾಗೋಷ್ಠಿಯಲ್ಲೇ ಪ್ರಸ್ತುತಪಡಿಸುತ್ತೇವೆ ಎಂದು ಚಿತ್ರ ಸಾಹಿತಿ ಕೆ. ಕಲ್ಯಾಣ್ ತಿಳಿಸಿದರು.

‘ನನ್ನೊಂದಿಗೆ ಅರ್ಧ ಗಂಟೆ ಮಾತನಾಡಿದರೂ ಸಾಕು ಅಸಕೆ ವಿರಸ ಮರೆತು ನನ್ನೊಂದಿಗೆ ಬರುತ್ತಾಳೆ. ಆದರೆ, ಆಕೆಯನ್ನು ಕುಟುಂಬದವರು ಬಿಡುತ್ತಿಲ್ಲ. ಯಾವುದೋ ಅವ್ಯಕ್ತ ಭಯ ಅವರನ್ನು ಕಾಡುತ್ತಿದೆ ಎಂದು ನನಗೆ ಅನಿಸುತ್ತಿದೆ’ ಎಂದರು.

ಪತ್ನಿ ಮೇಲೆ ಪ್ರಭಾವ ಬೀರಿ ನನ್ನ ವಿರುದ್ಧ ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದರು.

ನನ್ನ ಹಲವು ಹಾಡುಗಳು ಅವಳಿಗಿಷ್ಟ. ಆದರೆ, ಯಾರದೋ ಒತ್ತಡಕ್ಕೆ ಮಣಿದು ಹೀಗೆ ಆಡುತ್ತಿದ್ದಾಳೆ. ಅವಳು ಒಳ್ಳೆಯವಳು. ಆಕೆ ನನ್ನ ವಿರುದ್ಧ ಏನೇ ಆರೋಪ ಮಾಡಿದ್ದರೂ ನಾನು ಅವಳನ್ನು ಪ್ರೀತಿಸುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.