ಮಂಗಳೂರು: ಡಾ.ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ವತಿಯಿಂದ ನೀಡುವ ‘ಕದ್ರಿ ಸಂಗೀತ ಸೌರಭ– 2022’ ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಗೆ ಸಂಗೀತ ವಿದ್ವಾನ್ ಎಂ.ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.

‘ನಗರದ ಉರ್ವ ಸ್ಟೋರ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇದೇ 6 ರಂದು ಏರ್ಪಡಿಸಿರುವ ಕದ್ರಿ ಗೋಪಾಲನಾಥ್ ಅವರ 73 ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಪ್ರಶಸ್ತಿಯು ₹ 50,000 ನಗದು ಹಾಗೂ ಬೆಳ್ಳಿಯ ಫಲಕ ಹೊಂದಿದೆ’ ಎಂದು ಅಕಾಡೆಮಿಯಪ್ರಧಾನ ಕಾರ್ಯದರ್ಶಿ ಕದ್ರಿ ಮಣಿಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮೂಡುಬಿದಿರೆಯಲ್ಲಿ ಹುಟ್ಟಿದ ಎಂ.ನಾರಾಯಣ 25 ವರ್ಷಗಳಿಂದ ಸಂಗೀತ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿದ್ದಾರೆ. ಸಂಗೀತ ರಚನಕಾರರಾಗಿರುವ ಇವರು ನಾರಾಯಣದಾಸ ನಾಮಾಂಕಿತದಲ್ಲಿ ಈವರೆಗೆ ವಿವಿಧ ರಾಗ ತಾಳಗಳಲ್ಲಿ 25 ಜತಿ ಸ್ವರಗಳು, 75 ತಾಣ ವರ್ಣಗಳು, 4 ಸ್ವರ ಜತಿಗಳು, 200 ಕೃತಿಗಳು ಹಾಗು 15 ತಿಲ್ಲಾನಗಳನ್ನು ಕನ್ನಡ, ತೆಲುಗು ಹಾಗೂ ಸಂಸ್ಕೃತ ಭಾಷೆಗಳಲ್ಲಿ ರಚಿಸಿದ್ದಾರೆ. 72 ಮೇಳಕರ್ತ ರಾಗಗಳಲ್ಲೂ ಕೃತಿ ರಚಿಸಿರುವ ರಾಜ್ಯದ ಕೆಲವೇ ಕೆಲವು ರಚನಕಾರರಲ್ಲಿ ಇವರು ಒಬ್ಬರು. ಮಹಾಗಣಪತಿಯ ಕುರಿತಾಗಿಯೇ 47 ಕೃತಿಗಳನ್ನು ರಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.