ಕಲಬುರ್ಗಿ: ಸೇಡಂ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರು ಶಿವರಾತ್ರಿ ಹಬ್ಬದ ನಿಮಿತ್ತ ಭಕ್ತರಿಗೆ ದರ್ಶನ ನೀಡುತ್ತಿದ್ದರು.

ಆದರೆ, ಈ ವರ್ಷ ಸೋಮವಾರ ಭಕ್ತರಿಗೆ ದರ್ಶನ ನೀಡಲಿಲ್ಲ. ಇದರಿಂದಾಗಿ ಮಾಣಿಕ್ಯಗಿರಿಯಲ್ಲಿ ನೆಲೆಸಿರುವ ಮಾತಾ ಮಾಣಿಕೇಶ್ವರಿ ದರ್ಶನಕ್ಕಾಗಿ ಕಾದು ಕುಳಿತ ಭಕ್ತರಿಗೆ ನಿರಾಸೆಯುಂಟಾಯಿತು.

ಇತ್ತೀಚೆಗೆ ಅಮ್ಮನವರ ದೇಹಾರೋಗ್ಯದಲ್ಲಿ ಏರುಪೇರಾದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು.

ನಂತರ ಅಮ್ಮನವರೇ ಆರೋಗ್ಯ ಚನ್ನಾಗಿ ಇರುವುದಾಗಿ ಸ್ಪಷ್ಟೀಕರಣ ನೀಡಿದ್ದರು.

ಈಗ ಅಮ್ಮನವರ ದರ್ಶನ ಆಗದ ಹಿನ್ನೆಲೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ ಅಮ್ಮನವರು ಅನುಷ್ಠಾನದಲ್ಲಿರುವುದಾಗಿ ತಿಳಿಸಿದ್ದು, ಇದೇ ಕಾರಣಕ್ಕೆ ದರ್ಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ...ಕಾದು ಕುಳಿತ ಭಕ್ತ ಸಮೂಹಕ್ಕೆ ದರ್ಶನ ನೀಡಿದ ಮಾತೆ ಮಾಣಿಕೇಶ್ವರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.