ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಆಸ್ತಿಗಳಿಗೆ ಹಾನಿ ಉಂಟು ಮಾಡುವ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇಂತಹ ದುಷ್ಕೃತ್ಯ ಎಸಗುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾನೂನು ಜಾರಿಗೆ ತರಲು ಮುಂದಾಗಿದೆ.

ಇಂತಹ ಕೃತ್ಯಗಳು ಜಾಮೀನುರಹಿತ ಅಪರಾಧ ಆಗಲಿವೆ. ಹಾನಿ ಮಾಡಿರುವ ಸರ್ಕಾರಿ ಆಸ್ತಿಯ ಖರೀದಿ ದರದ ಎರಡು ಪಟ್ಟು ದಂಡ ಹಾಗೂ ಈ ಅಪರಾಧದ ತನಿಖೆ ನಡೆಸುವ ನ್ಯಾಯಾಲಯ ನಿರ್ಧರಿಸುವ ಆಸ್ತಿ ಹಾನಿಯ ನಷ್ಟದ ಮೊತ್ತವನ್ನು ಕೂಡಾ ಅಪರಾಧಿಯಿಂದ ವಸೂಲು ಮಾಡಲು ಈ ಕಾನೂನಿನಡಿ ಅವಕಾಶ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ.

ಈ ಉದ್ದೇಶದಿಂದ ‘ಕರ್ನಾಟಕ ಸರ್ಕಾರಿ ನೌಕರರ ವಿರುದ್ಧದ ಹಿಂಸಾಚಾರ ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಸ್ತಿ ಹಾನಿ ನಿಷೇಧ ಕಾಯ್ದೆ–2026’ ರೂಪಿಸಲು ಕರಡು ಮಸೂದೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ಸಿದ್ಧಪಡಿಸಿದೆ.

ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಪದಗಳಿಂದ ನಿಂದಿಸಿರುವುದಲ್ಲದೇ, ಕಚೇರಿಗೆ ಬೆಂಕಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ಗುಡಮಾದನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದನ್ನು ಪರಿಶೀಲಿಸಲು ಗ್ರಾಮ ಸಹಾಯಕ ನವೀನ್ಕುಮಾರ್ ಜತೆಗೆ ತೆರಳಿದ್ದ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಜಿ. ಭವ್ಯಾ ಅವರನ್ನು ಒತ್ತುವರಿದಾರ, ಜೆಡಿಎಸ್ ನಾಯಕರ ಒಡನಾಟ ಇರುವ ಪುಟ್ಟಸ್ವಾಮಿ, ‘ಮೊದಲು ನಿಮ್ಮ ಹೆಣ ಬೀಳುತ್ತದೆ’ ಎಂದು ಬೆದರಿಕೆ ಹಾಕಿದ್ದರು.

ಈ ಎರಡು ಘಟನೆಗಳಿಂದ ತೀವ್ರ ಮುಜುಗರ ಎದುರಿಸಿದ್ದ ಸರ್ಕಾರ, ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರತ್ಯೇಕ ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

‘ಸರ್ಕಾರಿ ನೌಕರರ ಸುರಕ್ಷತೆ, ಘನತೆ ಕಾಪಾಡುವುದರ ಜೊತೆಗೆ, ಯಾವುದೇ ಅಡೆತಡೆ ಇಲ್ಲದೆ ಅವರು ಕರ್ತವ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗದ ಮೇಲೆ ಹಿಂಸಾಚಾರ, ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ, ನಿಂದನೆ ಮತ್ತು ಸರ್ಕಾರಿ ಆಸ್ತಿಗೆ ಹಾನಿ ಉಂಟು ಮಾಡುವಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಇದರಿಂದ ಸಾರ್ವಜನಿಕ ಆಡಳಿತ ಮತ್ತು ಅಗತ್ಯ ಸೇವೆಗಳ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಈ ವಿಷಯವನ್ನು ಪರಿಗಣಿಸಿ, ತಡೆಯಲು ಕಾನೂನು ರಚನೆಯೇ ಸೂಕ್ತವೆಂಬ ಅಭಿಪ್ರಾಯ ವ್ಯಕ್ತವಾಯಿತು’ ಎಂದೂ ಮೂಲಗಳು ಹೇಳಿವೆ.

ಉದ್ದೇಶಿತ ಮಸೂದೆಯು ಶಾಲಾ ಕಾಲೇಜುಗಳು, ನಿಗಮ– ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು, ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ, ಸಿಬ್ಬಂದಿ, ಹೊರಗುತ್ತಿಗೆ ಅಥವಾ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ ನೌಕರರಿಗೆ ಅನ್ವಯವಾಗಲಿದೆ. ಈ ನೌಕರರ ಮೇಲೆ ಹಿಂಸಾಚಾರ ಎಸಗುವವರನ್ನು ಅಥವಾ ಎಸಗಲು ಪ್ರಯತ್ನಿಸುವವರನ್ನು, ಪ್ರಚೋದಿಸುವವರನ್ನು ಆರೋಪಿಗಳೆಂದು ಪರಿಗಣಿಸಲಾಗುವುದು. ಅಲ್ಲದೆ, ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ಬಳಿಕ ಅದರಲ್ಲಿರುವ ನಿಬಂಧನೆಗಳು, ಈಗಾಗಲೇ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ನಿಬಂಧನೆಗಳಿಗೆ ಹೆಚ್ಚುವರಿಯಾಗಿ ಇರಲಿದೆ ಎಂದೂ ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

‘ಕರ್ನಾಟಕ ಸರ್ಕಾರಿ ನೌಕರರ ವಿರುದ್ಧದ ಹಿಂಸಾಚಾರ ಮತ್ತು ಸರ್ಕಾರಿ ಕಚೇರಿಗಳಲ್ಲಿ ಆಸ್ತಿ ಹಾನಿ ನಿಷೇಧ ಕಾಯ್ದೆ–2026’

ಕರಡು ಸಿದ್ಧಪಡಿಸಿದ ಸರ್ಕಾರ

ಯಾವುದೆಲ್ಲ ‘ಹಿಂಸಾಚಾರ’?

ಉದ್ದೇಶಿತ ಮಸೂದೆಯಲ್ಲಿ ಸರ್ಕಾರಿ ಅಧಿಕಾರಿ, ನೌಕರನಿಗೆ ಗಾಯ, ಹಾನಿ, ಜೀವಕ್ಕೆ ಅಪಾಯ ಅಥವಾ ಅಧಿಕೃತ ಕರ್ತವ್ಯಗಳ ನಿರ್ವಹಣೆಗೆ ಅಡ್ಡಿ ಉಂಟು ಮಾಡುವ ಅಥವಾ ಉಂಟು ಮಾಡುವ ಸಾಧ್ಯತೆ ಇರುವ ಯಾವುದೇ ಚಟುವಟಿಕೆ ಯನ್ನು ‘ಹಿಂಸಾಚಾರ’ ಎಂದು ಪರಿಗಣಿಸಲಾಗಿದೆ.

ದೈಹಿಕ ಹಲ್ಲೆ, ಬೆದರಿಸುವುದು, ಬಲವಂತಪಡಿಸುವುದು, ಆತಂಕ ಸೃಷ್ಟಿಸುವುದು ಅಥವಾ ಸರ್ಕಾರಿ ಕಚೇರಿಗಳಲ್ಲಿನ ಆಸ್ತಿಗಳಿಗೆ ಹಾನಿ ಉಂಟು ಮಾಡುವುದು, ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮದ (ಕರೆ ಮಾಡಿ) ಮೂಲಕವೂ ನಿಂದಿಸಿ, ಸರ್ಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡುವುದನ್ನು ಹಿಂಸಾಚಾರದ ವ್ಯಾಪ್ತಿಯ ಒಳಗೆ ತರಲಾಗಿದೆ. ಸರ್ಕಾರಿ ನೌಕರನ ವಿರುದ್ಧದ ಈ ರೀತಿಯ ಯಾವುದೇ ಹಿಂಸಾಚಾರ ಅಥವಾ ಆಸ್ತಿ ಹಾನಿಯನ್ನು ಈ ಮಸೂದೆಯು ನಿಷೇಧಿಸಲಿದೆ.

ಅಪರಾಧಿಗೆ ಏನೆಲ್ಲ ಶಿಕ್ಷೆ?

l ಇಂತಹ ಅಪರಾಧ ಜಾಮೀನುರಹಿತವೆಂದು
ಪರಿಗಣಿಸಲಾಗುವುದು

l ಕೃತ್ಯ ಎಸಗುವ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ,
₹50 ಸಾವಿರದವರೆಗೆ ದಂಡ

l ಹಾನಿಯಾದ ಆಸ್ತಿಯ ಖರೀದಿ ಬೆಲೆಯ ಎರಡು ಪಟ್ಟು ದಂಡ

l ಅಪರಾಧದ ತನಿಖೆ ನಡೆಸುವ ನ್ಯಾಯಾಲಯವು ನಿರ್ಧರಿಸಿದಂತೆ ಆಸ್ತಿಗೆ ಉಂಟಾದ ನಷ್ಟ ವಸೂಲಿ

l ದಂಡದ ಮೊತ್ತ ಪಾವತಿಸಲು ವಿಫಲವಾದರೆ ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ವಸೂಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.