ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಷಯ ಪ್ರಸ್ತಾಪವಾದರೆ ಪ್ರತಿಭಟನೆ ನಡೆಸಲು ಸಜ್ಜಾಗಿ ಬಂದಿದ್ದ ಕಾಂಗ್ರೆಸ್ ಶಾಸಕರಿಗೆ ನಿರಾಸೆ ಕಾದಿತ್ತು. ರಾಜ್ಯಪಾಲರ ಭಾಷಣದಲ್ಲಿ ಸಿಎಎ ಬಗ್ಗೆ ಒಂದೇ ಒಂದು ಸಾಲೂ ಇರಲಿಲ್ಲ. ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ವಿಧಾನಸಭೆಯೊಳಗೆ ಘೋಷಣಾ ಭಿತ್ತಿ ಪತ್ರಗಳನ್ನು ಒಯ್ದಿದ್ದರು. ರಾಜ್ಯಪಾಲರ ಭಾಷಣ ಮುಗಿದ ಬಳಿಕ ಹೊರಬಂದ ಐವನ್, ‘ನಾವು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬೇಕು ಎಂದು ಸಜ್ಜಾಗಿ ಬಂದಿದ್ದೆವು, ಆಗಲಿಲ್ಲ ಎಲ್ಲ ವೇಸ್ಟ್ ಆಯಿತು’ ಎಂದು ಸುದ್ದಿಗಾರರಿಗೆ ಹೇಳಿದರು.

ಕಮಿಷನರ್‌ಗೆ ಅಡ್ಡಗಟ್ಟಿದ ಮಾರ್ಷಲ್: ರಾಜ್ಯಪಾಲ ವಜುಭಾಯಿ ವಾಲಾ ಅವರು ಬೆಳಿಗ್ಗೆ 11 ಕ್ಕೆ ವಿಧಾನಸಭೆ ಮೊಗಸಾಲೆಯಿಂದ ಸಭಾಂಗಣದೊಳಗೆ ಪ್ರವೇಶಿಸಿದರು. ಅವರ ಹಿಂದೆಯೇ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮೊಗಸಾಲೆಯೊಳಗೆ ಪ್ರವೇಶಿಸಲು ಬಂದಾಗ ಮಾರ್ಷಲ್‌ಗಳು ತಡೆದರು. ಅವರು ಸಮವಸ್ತ್ರದಲ್ಲಿ ಬಂದ ಕಾರಣಕ್ಕೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ಆಯುಕ್ತರು ತಬ್ಬಿಬ್ಬಾದರು. ಖಾಕಿ ಸಮವಸ್ತ್ರದಲ್ಲಿ ಬರುವಂತೆ ಇಲ್ಲ ಎಂಬುದನ್ನು ಅವರಿಗೆ ತಿಳಿಸಲಾಯಿತು. ಇದಾದ ಒಂದೆರಡು ನಿಮಿಷಗಳಲ್ಲೇ ಅವರನ್ನು ಮೊಗಸಾಲೆಯೊಳಗೆ ಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.