ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣ್‌ ಸಿಂಗ್‌, ನಡ್ಡಾ, ಶಾ ಎಲ್ಲಿ ಹೋದರು: ಬಿಜೆಪಿಗೆ ಕಾಂಗ್ರೆಸ್‌ ಪ್ರಶ್ನೆ

Published 5 ಜುಲೈ 2023, 1:49 IST
Last Updated 5 ಜುಲೈ 2023, 1:49 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಎರಡು ದಿನವೂ ವಿರೋಧ ಪಕ್ಷದ ನಾಯಕನಿಲ್ಲದೆ ಕಲಾಪಕ್ಕೆ ಹಾಜರಾದ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟೀಕಾ ಪ್ರಹಾರ ನಡೆಸಿದೆ.

ಬಿಜೆಪಿಯವರು ವಿರೋಧ ಪಕ್ಷದ ನಾಯಕನನ್ನು ಹುಡುಕುವ ಬದಲು, ಪಕ್ಷದಲ್ಲಿ ತಮ್ಮ ವಿರೋಧಿ ನಾಯಕನನ್ನು ಹುಡುಕುತ್ತಿದ್ದಾರೆ ಎಂದು ಕುಹಕವಾಡಿದೆ.

ಚುನಾವಣೆಗೆ ಕರ್ನಾಟಕದಲ್ಲೇ ಬಿಡಾರ ಹೂಡಿದ್ದ ಬಿಜೆಪಿ ನಾಯಕರು ಈಗ ರಾಜ್ಯ ಬಿಜೆಪಿಗರನ್ನು ಕ್ಯಾರೇ ಎನ್ನುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ವಿರೋಧ ಪಕ್ಷದ ನಾಯಕನನ್ನು ಹುಡುಕುವ ಬದಲು ಪಕ್ಷದಲ್ಲಿ ತಮ್ಮ ವಿರೋಧಿ ನಾಯಕನನ್ನು ಹುಡುಕುತ್ತಿದ್ದಾರೆ ಬಿಜೆಪಿಗರು. ಸದನ ಕಲಾಪದ 2ನೇ ದಿನವೂ ವಿರೋಧ ಪಕ್ಷದ ನಾಯಕನಿಲ್ಲ‘ ಎಂದಿದೆ.

‘ಎಲ್ಲಿ ಹೋದರು ಉಸ್ತುವಾರಿ ಅರುಣ್ ಸಿಂಗ್?, ಎಲ್ಲಿ ಹೋದರು ಜೆ ಪಿ ನಡ್ಡಾ? ಎಲ್ಲಿ ಹೋದರು ಅಮಿತ್ ಶಾ?. ಚುನಾವಣೆಗೆ ಕರ್ನಾಟಕದಲ್ಲೇ ಬಿಡಾರ ಹೂಡಿದ್ದ ಬಿಜೆಪಿ ನಾಯಕರು ಈಗ ರಾಜ್ಯ ಬಿಜೆಪಿಗರನ್ನು ಕ್ಯಾರೆ ಎನ್ನುತ್ತಿಲ್ಲವೇ‘ ಎಂದು ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT