ವಿಮಾನ ನಿಲ್ದಾಣದಲ್ಲಿ ದಟ್ಟಣೆ
ದೇವನಹಳ್ಳಿ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ 8ಗಂಟೆ ನಂತರ ಓಲಾ, ಉಬರ್ ಕ್ಯಾಬ್ ಸಂಚಾರ ಇರುವುದಿಲ್ಲ ಎಂದು ಪ್ರಯಾಣಿಕರು ಬೆಳಗ್ಗೆಯೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದರಿಂದ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು.
ವಿಮಾನ ನಿಲ್ದಾಣದ ಡ್ರಾಪ್ ಪಾಯಿಂಟ್‌ನಲ್ಲಿ ದಟ್ಟಣೆ ಇತ್ತು. ಟರ್ಮಿನಲ್‌ಗಳ ಮುಂದೆ ಜನರ ದಂಡೇ ನೆರೆದಿತ್ತು. ಬಿಎಂಟಿಸಿ ವಾಯುವಜ್ರ ಬಸ್‌ಗಳು ಸಂಚರಿಸಿದವು. ಮಧ್ಯಾಹ್ನದ ಹೊತ್ತಿಗೆ ಟ್ಯಾಕ್ಸಿ ಆರಂಭದೊಂದಿಗೆ ವಿಮಾನ ನಿಲ್ದಾಣ ಯಥಾಸ್ಥಿತಿಗೆ
ಮರಳಿತು.