ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ’: ಡಿಕೆಶಿ ಬಗ್ಗೆ ಬಿಜೆಪಿ ವ್ಯಂಗ್ಯ

Last Updated 13 ಮೇ 2022, 5:36 IST
ಅಕ್ಷರ ಗಾತ್ರ

ಬೆಂಗಳೂರು: 'ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ'ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ಬಿಜೆಪಿ ಟ್ವೀಟ್‌ ಮೂಲಕ ವ್ಯಂಗ್ಯವಾಡಿದೆ.

ಮಾಜಿ ಸಂಸದೆ ರಮ್ಯಾ ಅವರು ಡಿ.ಕೆ.ಶಿವಕುಮಾರ್ ಮೇಲೆ ಪರೋಕ್ಷವಾಗಿ ಕಿಡಿ ಕಾರಿರುವುದನ್ನು ಪ್ರಸ್ತಾಪಿಸಿರುವ ಬಿಜೆಪಿ, 'ಡಿ.ಕೆ.ಶಿ ಈಗ ಅಸಹಾಯಕ ಸ್ಥಿತಿ ತಲುಪಿದ್ದಾರೆ. ಅವರೇ ಬೆಳೆಸಿದ ರಮ್ಯಾ ಈಗ ಸಾಮಾಜಿಕ ಮಾಧ್ಯಮದ ಮೂಲಕ ಬುದ್ಧಿ ಹೇಳುತ್ತಿದ್ದಾರೆ'ಎಂದಿದೆ.

'ರಮ್ಯಾ ಅವರನ್ನು ಭ್ರಷ್ಟಾಧ್ಯಕ್ಷರ ವಿರುದ್ಧ ಛೂಬಿಟ್ಟಿದ್ದು ಮೀರ್‌ಸಾದಿಕ್ ಅವರಿರಬಹುದೇ'ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದೆ.

'ಡಿಕೆಶಿ ಅವರ ವಿರೋಧಿಗಳ ಸಾಲಿಗೆ ಈಗ ರಮ್ಯಾ ಕೂಡಾ ಸೇರಿದ್ದಾರೆ. ಡಿಕೆಶಿ ಅವರೇ ನಿಮ್ಮ ಜತೆ ಸಹೋದರ ಡಿ.ಕೆ.ಸುರೇಶ್‌ ಅವರಾದರೂ ನಿಲ್ಲಬಹುದೇ'ಎಂದು ಬಿಜೆಪಿ ಕಟಕಿಯಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT