ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ: ಸಹೋದರರ ಸ್ಪರ್ಧೆಯಲ್ಲಿ ರಮೇಶ ಜಾರಕಿಹೊಳಿಗೆ ಜಯ

‘ಅನರ್ಹ’ಗೆ ಅರ್ಹ ಪಟ್ಟ ಕಟ್ಟಿದ ಮತದಾರರು
Last Updated 9 ಡಿಸೆಂಬರ್ 2019, 10:12 IST
ಅಕ್ಷರ ಗಾತ್ರ

ಬೆಳಗಾವಿ:ಜಿಲ್ಲೆಯ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರಮೇಶ ಜಾರಕಿಹೊಳಿ ಸೋದರ ಲಖನ್ ಜಾರಕಿಹೊಳಿಯನ್ನು ಹಿಂದಿಕ್ಕಿಗೆಲುವಿನ ನಗೆ ಬೀರಿದ್ದಾರೆ.

ಅಂತಿಮ ಸುತ್ತಿನ ಮತ ಎಣಿಕೆ ಮುಗಿದಿದ್ದುರಮೇಶ ಜಾರಕಿಹೊಳಿ ಅವರು 29006 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಲಖನ್ ಜಾರಕಿಹೊಳಿ ಅವರು ಸೋಲನುಭವಿಸಿದ್ದಾರೆ.ಜೆಡಿಎಸ್‌ನ ಅಶೋಕ ಪೂಜಾರಿ ಮೂರನೆ ಸ್ಥಾನಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಸ್ಪರ್ಧೆಯಿಂದಾಗಿ ಗೋಕಾಕ ಉಪ ಚುನಾವಣಾ ಕಣ ರಾಜ್ಯದ ಗಮನ ಸೆಳೆದಿತ್ತು. ಇಲ್ಲಿ ರಮೇಶ್ ಅವರ ಸಹೋದರ ಲಖನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು.

ಪಕ್ಷ, ಸಿದ್ಧಾಂತ, ಸಂಘಟನೆಗಿಂತಲೂ ‘ಜಾರಕಿಹೊಳಿ’ ಕುಟುಂಬ ಕೇಂದ್ರಿತ ರಾಜಕಾರಣವಿರುವ ಗೋಕಾಕದಲ್ಲಿಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿಯಉಪಚುನಾವಣೆಯಲ್ಲಿ ಶೇ 1.31ರಷ್ಟು (ಶೇ 73.08) ಹೆಚ್ಚು ಮತದಾನವಾಗಿತ್ತು.

ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ರಮೇಶ ಜಾರಕಿಹೊಳಿ
ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ರಮೇಶ ಜಾರಕಿಹೊಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT