ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್–19 ದೃಢಪಟ್ಟ 1,196 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ.
ಭಾನುವಾರ 2,036 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 9,01,410 ತಲುಪಿದ್ದು, ಈ ಪೈಕಿ 8,72,038 ಮಂದಿ ಗುಣಮುಖರಾಗಿದ್ದಾರೆ ಹಾಗೂ 11,944 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 17,409 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ 260 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ 672 ಹೊಸ ಪ್ರಕರಣಗಳು, ಮೈಸೂರಿನಲ್ಲಿ 42, ಬಳ್ಳಾರಿಯಲ್ಲಿ 36, ಚಿಕ್ಕಬಳ್ಳಾಪುರದಲ್ಲಿ 55, ದಕ್ಷಿಣ ಕನ್ನಡದಲ್ಲಿ 36, ಚಿತ್ರದುರ್ಗದಲ್ಲಿ ಕೋವಿಡ್ ದೃಢಪಟ್ಟ 33 ಪ್ರಕರಣಗಳು ದಾಖಲಾಗಿವೆ.