ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಟ್‌ ಹುದ್ದೆ ಕಡಿತ ಪ್ರಸ್ತಾವ ಹಿಂದಕ್ಕೆ; ಸಮಿತಿ ರಚನೆ

Last Updated 10 ಫೆಬ್ರುವರಿ 2023, 4:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಗಳಲ್ಲಿನ ಶೇ 70ರಷ್ಟು ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ವಾಪಸ್‌ ಕಳುಹಿಸಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಡಯಟ್‌ಗಳ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿರುವ ಕೇರಳ, ಗುಜರಾತ್ ಹಾಗೂ ಸಾಂಸ್ಥಿಕ ಸ್ವರೂಪ ಬದಲಾವಣೆಗೊಂಡಿರುವ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದ ಮಾಹಿತಿ ಪಡೆದು ವರದಿ ಸಲ್ಲಿಸಲು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ನೇತೃತ್ವದಲ್ಲಿ ಸಮಿತಿ ರಚಿಸಲು ಸೂಚಿಸಿದ್ದಾರೆ.

‘ಡಯಟ್‌ಗಳಲ್ಲಿನ ಅನಗತ್ಯ ಸಿಬ್ಬಂದಿ ಹೊರೆ ತಗ್ಗಿಸಬೇಕಿದ್ದು, ಪ್ರತಿ ಡಯಟ್‌ನಲ್ಲೂ ಒಬ್ಬರು ಪ್ರಾಂಶುಪಾಲ, ತಲಾ ನಾಲ್ವರು ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರಿಗೆ ಸೀಮಿತಗೊಳಿಸಬೇಕಿದ್ದು, ಅದಕ್ಕಾಗಿ ಶೇ 70ರಷ್ಟು ಹುದ್ದೆ ರದ್ದು ಮಾಡಬಹುದು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್‌ ಕುಮಾರ್ ಸಿಂಗ್ ಅವರು ಈಚೆಗೆ ಸಚಿವ ನಾಗೇಶ್‌ ಅವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಈ ಕುರಿತು ‘ಪ್ರಜಾವಾಣಿ’ ಫೆ. 3ರ ಸಂಚಿಕೆಯಲ್ಲಿ ‘ಡಯಟ್‌: ಶೇ 70ರಷ್ಟು ಹುದ್ದೆ ಕಡಿತ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT