ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿನಗರ| ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಆಸ್ತಿ ₹ 439 ಕೋಟಿ, ಸ್ವಂತ ಕಾರಿಲ್ಲ

Last Updated 18 ಏಪ್ರಿಲ್ 2023, 6:35 IST
ಅಕ್ಷರ ಗಾತ್ರ

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್‌.ಎ. ಹ್ಯಾರಿಸ್ (56) ಸೋಮವಾರ ನಾಮಪತ್ರ ಸಲ್ಲಿಸಿದ್ದು, ₹ 439 ಕೋಟಿ ಆಸ್ತಿ ಘೋಷಿಸಿದ್ದಾರೆ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹ್ಯಾರಿಸ್ ₹ 190.24 ಕೋಟಿ ಆಸ್ತಿ ಘೋಷಿಸಿದ್ದರು. ಶಾಸಕರಾಗಿ ಗೆದ್ದ ನಂತರ ಐದು ವರ್ಷಗಳಲ್ಲಿ ಅವರ ಆಸ್ತಿ ₹ 248.76 ಕೋಟಿಯಷ್ಟು ಹೆಚ್ಚಳವಾಗಿದೆ.

ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಎಂ.ಎ ವ್ಯಾಸಂಗ ಮಾಡಿರುವ ಹ್ಯಾರಿಸ್, ನಲಪಾಡ್ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರೆಂದು ಹೇಳಿಕೊಂಡಿದ್ದಾರೆ.

2017–18ರಲ್ಲಿ ₹ 7.40 ಕೋಟಿ ವಾರ್ಷಿಕ ಆದಾದ ಘೋಷಿಸಿದ್ದ ಹ್ಯಾರಿಸ್, 2021–22ರಲ್ಲಿ ₹ 6.48 ಕೋಟಿ ವಾರ್ಷಿಕ ಆದಾಯಕ್ಕೆ ಲೆಕ್ಕ ನೀಡಿದ್ದಾರೆ.

ಹ್ಯಾರಿಸ್ ಹೆಸರಿನಲ್ಲಿ ₹ 167.10 ಕೋಟಿ ಚರಾಸ್ತಿ ಹಾಗೂ ₹ 41.82 ಕೋಟಿ ಸ್ಥಿರಾಸ್ತಿ ಇದೆ. ಜೊತೆಗೆ, ₹ 28.29 ಕೋಟಿ ಸಾಲವಿದೆ. ಪತ್ನಿ ತಾಹೀರಾ ಹ್ಯಾರಿಸ್ ಹೆಸರಿನಲ್ಲಿ ₹ 8.27 ಲಕ್ಷ ಚರಾಸ್ತಿ ಹಾಗೂ ₹ 41.82 ಕೋಟಿ ಸ್ಥಿರಾಸ್ತಿ ಇದೆ. ಇಬ್ಬರ ಬಳಿಯೂ ಸ್ವಂತ ಕಾರಿಲ್ಲ.

ಅಕ್ರಮ ಗುಂಪು ಕಟ್ಟಿಕೊಂಡು ಪ್ರತಿಭಟನೆ ನಡೆಸಿ ಸಾರ್ವಜನಿಕರ ಆಸ್ತಿಗೆ ಹಾನಿ ಮಾಡಿದ್ದ ಆರೋಪದಡಿ ಸಿದ್ದಾಪುರ ಠಾಣೆಯಲ್ಲಿ ಹ್ಯಾರಿಸ್ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT