ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ನಿಗಮಗಳ ನೇಮಕಾತಿ ಪರೀಕ್ಷೆ: ಹಿಜಾಬ್‌ ತಪಾಸಣೆಗೆ ಒಂದು ಗಂಟೆ ನಿಗದಿ!

ಅ.28 ಹಾಗೂ 29ರಂದು ನಡೆಯುವ ಪರೀಕ್ಷೆಗೆ ಕೆಇಎ ನೀತಿ ಸಂಹಿತೆ
Published 20 ಅಕ್ಟೋಬರ್ 2023, 23:30 IST
Last Updated 20 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ನಿಗಮ, ಮಂಡಳಿಗಳ ನೇಮಕಾತಿಗೆ ಅ.28 ಹಾಗೂ 29ರಂದು ನಡೆಯುವ ಪರೀಕ್ಷೆಗೆ ಹಿಜಾಬ್‌ ಧರಿಸಿದವರು ಒಂದು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಹಾಜರಾಗಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.

ಶಾಲೆ-ಕಾಲೇಜುಗಳ ಒಳಗೆ ಹಿಜಾಬ್‌ ಧರಿಸುವುದನ್ನು ಹಿಂದಿನ ಬಿಜೆಪಿ ಸರ್ಕಾರ ನಿಷೇಧಿಸಿತ್ತು. ಈಗ ಪರೀಕ್ಷೆಗೆ ಹಿಜಾಬ್ ಧರಿಸಿ ಬರಲು ಪ್ರಾಧಿಕಾರ ಅವಕಾಶ ನೀಡಿದ್ದರೂ, ತಪಾಸಣೆಗಾಗಿ ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ಬರಬೇಕು ಎನ್ನುವ ಷರತ್ತು ವಿಧಿಸಿದೆ.

ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌, ಬಟನ್‌ಗಳನ್ನು ಹೊಂದಿರುವ ಬಟ್ಟೆ, ಪೂರ್ಣ ತೋಳಿನ ವಸ್ತ್ರ, ಜಿನ್ಸ್ ಪ್ಯಾಂಟ್‌, ಲೋಹದ ಆಭರಣ ಧರಿಸುವುದನ್ನು, ಪುರುಷರು ಕಿವಿಯೋಲೆ, ಉಂಗುರ, ಕಡಗ, ಕುರ್ತಾ, ಪೈಜಾಮ, ಜಿನ್ಸ್‌ ಧರಿಸುವುದನ್ನು ನಿಷೇಧಿಸಿದೆ.

ತಲೆಮೇಲೆ ಟೋಪಿ, ಬಾಯಿ, ಕಿವಿ ಮತ್ತು ತಲೆ ಮುಚ್ಚುವ ವಸ್ತ್ರ ಧರಿಸುವಂತಿಲ್ಲ. ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಪೆನ್ಸಿಲ್‌, ಕಾಗದದ ಹಾಳೆಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಪ್ರವೇಶ ಪತ್ರ, ಭಾವಚಿತ್ರ, ಪಾರದರ್ಶಕ ಕುಡಿಯುವ ನೀರಿನ ಬಾಟಲ್‌ ತೆಗೆದುಕೊಂಡು ಹೋಗಲು ಅನುಮತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT