ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೆಡ್‌–ಕೆ: ಕರ್ನಾಟಕ ನಂದ ಗೋಪಿಕೃಷ್ಣ ಮೊದಲಿಗ

ಫಲಿತಾಂಶ ಪ್ರಕಟ: ಮೊದಲ 10ರಲ್ಲಿ ರಾಜ್ಯದ ಐವರಿಗೆ ಸ್ಥಾನ
Published 10 ಜೂನ್ 2023, 19:40 IST
Last Updated 10 ಜೂನ್ 2023, 19:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ) ಶನಿವಾರ ಯುಜಿಇಟಿ ಫಲಿತಾಂಶ ಪ್ರಕಟಿಸಿದ್ದು, ಮೊದಲ 10ರಲ್ಲಿ ಪ್ರಥಮ ರ್‍ಯಾಂಕ್‌ ಸೇರಿದಂತೆ ಕರ್ನಾಟಕದ ವಿದ್ಯಾರ್ಥಿಗಳು ಐದು ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಡಿಪಿಎಸ್‌ ಕಾಲೇಜು ವಿದ್ಯಾರ್ಥಿ ಎನ್‌.ನಂದ ಗೋಪಿಕೃಷ್ಣ ಪ್ರಥಮ ರ‍್ಯಾಂಕ್‌, ಹರಿಯಾಣ ಗುರುಗಾಂವ್‌ನ ಮನುಸ್ ಅಗರ್‌ವಾಲ್‌ ಹಾಗೂ ಬೆಂಗಳೂರು ಬನಶಂಕರಿಯ ಸಿದ್ದಾರ್ಥ್‌ ಪಮಿಡಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ರ‍್ಯಾಂಕ್ ಪಡೆದಿದ್ದಾರೆ.

ಮೈಸೂರಿನ ಶ್ರೇಯಾ ಪ್ರಸಾದ್ (8ನೇ ರ್‍ಯಾಂಕ್), ಸಂಜಯ ನಗರದ ಅರ್ಜುನ್‌ ಬಿ. ದೀಕ್ಷಿತ್ (9ನೇ ರ್‍ಯಾಂಕ್‌), ಆರ್‌.ಆರ್‌.ನಗರದ ಮನೀಶ್ ಎಚ್. ಪರಾಶರ್ (10ನೇ ರ್‍ಯಾಂಕ್‌) ಅವರು ಕರ್ನಾಟಕದವರಾಗಿದ್ದಾರೆ. ಮೊದಲ 10 ರ‍್ಯಾಂಕ್‌ ಪಡೆದವರಲ್ಲಿ ಹರಿಯಾಣ ಮತ್ತು ಕೇರಳದಿಂದ ತಲಾ ಇಬ್ಬರು, ಆಂಧ್ರಪ್ರದೇಶದ ಒಬ್ಬರು ಇದ್ದಾರೆ. ಅವರಲ್ಲಿ ಶ್ರೇಯಾ ಪ್ರಸಾದ್ ಹೊರತುಪಡಿಸಿ ಉಳಿದ ಎಲ್ಲರೂ ಬಾಲಕರು. 

90ರಿಂದ 100 ಪರ್ಸೆಂಟೈಲ್ ಮಧ್ಯೆ ಇರುವ 8,130 ಅಭ್ಯರ್ಥಿಗಳಲ್ಲಿ 2,543 ಕರ್ನಾಟಕದವರು. 80ರಿಂದ 90 ಪರ್ಸೆಂಟೈಲ್ ಮಧ್ಯೆ ಇರುವ 7,719 ಅಭ್ಯರ್ಥಿಗಳಲ್ಲಿ 2157 ಕರ್ನಾಟಕದವರು.  

ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್‌ ಮೂಲಕವೇ ಕೌನ್ಸೆಲಿಂಗ್‌ ನಡೆಸಲಾಗುವುದು. ಅಭ್ಯರ್ಥಿಗಳು ತಮ್ಮ ಲಾಗಿನ್ ಮೂಲಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಬಹುದು. ಮಾಹಿತಿಗೆ COMED-K ವೆಬ್‌ಸೈಟ್ www.comedk.org ಸಂಪರ್ಕಿಸಬಹುದು.

ಮೇ 28 ರಂದು ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕರ್ನಾಟಕದಿಂದ 25,244, ಇತರ ರಾಜ್ಯಗಳ 51,988 ವಿದ್ಯಾರ್ಥಿಗಳು ಸೇರಿ 77,232 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಮೆಡ್‌–ಕೆ ನಡೆಸುವ ಈ ಪರೀಕ್ಷೆಯು 180ಕ್ಕೂ ಅಧಿಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸುತ್ತದೆ. ಪ್ರಸಕ್ತ ವರ್ಷ ಸುಮಾರು 20 ಸಾವಿರ ಸೀಟುಗಳು ಲಭ್ಯವಿವೆ.

ನಂದ ಗೋಪಿಕೃಷ್ಣ ಸೇರದಿಂತೆ ಉನ್ನತ ಸ್ಥಾನ ಪಡೆದ ಬಹುತೇಕರು ಐಐಟಿಗೆ ಪ್ರವೇಶ ಪಡೆಯುವ ಉತ್ಸಾಹ ಹೊಂದಿದ್ದು, ಜೆಇಇ ಫಲಿತಾಂಶದತ್ತ ಚಿತ್ತ ನೆಟ್ಟಿದ್ದಾರೆ. ಕೆಸಿಇಟಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಮನೀಶ್‌, ಶ್ರೇಯಾ ಅವರು ಆರ್‌ವಿ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ಗೆ ಪ್ರವೇಶ ಪಡೆಯಲು ಬಯಸಿದ್ದಾರೆ. 

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT