ಮೈಸೂರು: ‘ರಾಜಕೀಯ ಸಂಧ್ಯಾಕಾಲದಲ್ಲಿ ನನ್ನ ಕೈಹಿಡಿದು ಶಾಸಕರನ್ನಾಗಿ ಮಾಡಿದ್ದು ಎಚ್.ಡಿ.ದೇವೇಗೌಡ. ಅಂಥವರ ಕೈಬಿಟ್ಟು ಹೋದರೆ ಆ ದೇವರು ಮೆಚ್ಚುವನೇ?’

–ಹೀಗೆಂದು ಪದೇಪದೇ ಹೇಳುತ್ತಿದ್ದ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಅಡಗೂರು ಎಚ್.ವಿಶ್ವನಾಥ್, ಈಗ ಆಸರೆ ನೀಡಿದವರಿಗೇ ಕೈಕೊಟ್ಟಿದ್ದಾರೆ.

ಇದನ್ನೂ ಓದಿ:ಕ್ಷಿಪ್ರ ಬೆಳವಣಿಗೆ| 12 ಶಾಸಕರಿಂದ ರಾಜೀನಾಮೆ ಸಲ್ಲಿಕೆ, ಶಾಸಕರಿಗೆ ಸಿಗದ ಸ್ಪೀಕರ್

ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿರುವ ಪುತ್ರ ಅಮಿತ್ ದೇವರಹಟ್ಟಿ ಅವರಿಗೆ ರಾಜಕೀಯ ಶಕ್ತಿ ತುಂಬಲು ಬಿಜೆಪಿ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿರುವುದು ಈಗ ಬಹಿರಂಗ ರಹಸ್ಯ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಮಯದಲ್ಲಿ, ತಮ್ಮ ಹುಟ್ಟೂರಾದ ಕೆ.ಆರ್.ನಗರ ಪುರಸಭೆ ಚುನಾವಣೆ ವೇಳೆ ಕುರುಬ ಸಮುದಾಯದ ಒಬ್ಬ ಬೆಂಬಲಿಗನಿಗೂ ಟಿಕೆಟ್ ಕೊಡಿಸಲು ಸಾಧ್ಯವಾಗದ ದಿನವೇ ಅವರು ಪಕ್ಷ ತೊರೆಯುವ ಚಿಂತನೆ ನಡೆಸಿದ್ದರು ಎಂದು ಅವರ ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ರಾಜೀನಾಮೆ ಪತ್ರ ಪಡೆದು ಸ್ವೀಕೃತಿ ನೀಡಲು ಸಿಬ್ಬಂದಿಗೆ ತಿಳಿಸಿದ್ದೇನೆ: ಸ್ಪೀಕರ್

ಪುರಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರವಾಗಿ ತಮ್ಮ ಸಲಹೆಯನ್ನು ಧಿಕ್ಕರಿಸಿ, ಸಚಿವ ಸಾ.ರಾ.ಮಹೇಶ್ ಜಾತಿ ರಾಜಕಾರಣ ಮಾಡಿದ್ದಾಗಿ ವಿಶ್ವನಾಥ್ ಈಚೆಗೆ ಆರೋಪಿಸಿದ್ದರು. ತಮಗೆ ಸಚಿವ ಸ್ಥಾನ ಸಿಗದಿರಲೂ ಅವರೇ ಕಾರಣ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು.

ಕಾಂಗ್ರೆಸ್‌ನಲ್ಲಿದ್ದ ಕೊನೆಯ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡಿದ್ದ ಅವರು, ಈಗ ದೊಡ್ಡಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧವೂ ಸೆಟೆದು ನಿಂತಿದ್ದಾರೆ.

ಕಾಶಿ ಪ್ರವಾಸದ ನೆಪದಲ್ಲಿ ಈಚೆಗೆ ನವದೆಹಲಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿ ಜೆಡಿಎಸ್ ತೊರೆಯಲು ಯೋಜನೆ ರೂಪಿಸಿದ್ದು ಈಗ ಬಹಿರಂಗಗೊಂಡಂತಾಗಿದೆ.

2 ಬಾರಿ ಗೆದ್ದಿದ್ದ ಬಿಜೆಪಿ: ಒಕ್ಕಲಿಗ ಹಾಗೂ ಕುರುಬ ಸಮುದಾಯದ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಲ್ಲಿ 1994 ಹಾಗೂ 1999ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಕಾಂಗ್ರೆಸ್‌ನಲ್ಲಿದ್ದಾಗ ಕೆ.ಆರ್.ನಗರದಿಂದ ಸ್ಪರ್ಧಿಸುತ್ತಿದ್ದ ವಿಶ್ವನಾಥ್, ಜೆಡಿಎಸ್ ಸೇರಿ 2018ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿಗೆ ಸ್ಥಳಾಂತರಗೊಂಡು ಗೆದ್ದು ಬಂದರು. ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ಅವರನ್ನು ಮಣಿಸಿದ್ದರು. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆರು ಬಾರಿ ಗೆಲುವು ಸಾಧಿಸಿದ್ದರು.

ವಿಶ್ವನಾಥ್ ಅವರನ್ನು ಜೆಡಿಎಸ್‌ಗೆ ಕರೆದುಕೊಂಡು ಬಂದವ ನಾನಲ್ಲ. ಆದರೆ, ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.

- ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

* ಇವನ್ನೂ ಓದಿ...

*ವಿಶ್ವಾಸ ಗಳಿಸುವಲ್ಲಿ ಸಿಎಂ ವಿಫಲ, 14 ಶಾಸಕರು ರಾಜೀನಾಮೆ ನೀಡಿದ್ದೇವೆ: ವಿಶ್ವನಾಥ್

*ರಾಜ್ಯ ರಾಜಕೀಯ | ಗೋವಾ, ಮಹಾರಾಷ್ಟ್ರದ ರೆಸಾರ್ಟ್ನತ್ತ ರಾಜೀನಾಮೆ ನೀಡಿದ ಶಾಸಕರು

*ಮತ್ತೆ 10 ಶಾಸಕರಿಂದ ರಾಜೀನಾಮೆ ಪರ್ವ?

*ರಾಜೀನಾಮೆ ಪರ್ವ | ಹೋಗುವವರನ್ನು ಹಿಡಿದುಕೊಳ್ಳಲು ಆಗಲ್ಲ: ಡಿ.ಕೆ.ಶಿವಕುಮಾರ್

*ರಾಜೀನಾಮೆ ನೀಡುತ್ತಿಲ್ಲ–ಸುಬ್ಬಾರೆಡ್ಡಿ ಸ್ಪಷ್ಟನೆ; ಪ್ರತಿಕ್ರಿಯೆಗೆ ಸಿಗದ ಸುಧಾಕರ್

*ರಾಜೀನಾಮೆ ಸಲ್ಲಿಸಿದ ಕೆ.ಸಿ.ನಾರಾಯಣಗೌಡ ಮನೆಗೆ ಪೊಲೀಸ್ ಭದ್ರತೆ

*ಅತೃಪ್ತರ ಮನವೊಲಿಕೆಗೆ ಡಿಕೆಶಿ ಎಂಟ್ರಿಕೊಟ್ಟಿದ್ದಾರೆ, ಕಾದು ನೋಡೋಣ: ಸಿದ್ದರಾಮಯ್ಯ

*ರಾಜೀನಾಮೆ ಪರ್ವ | ರಾಜಭವನಕ್ಕೆ ತೆರಳಿದ 8 ಮಂದಿ ಶಾಸಕರು

*ಸಿದ್ರಾಮು’ ಕಟ್ಟಿಹಾಕಲು ಗೌಡರ ‘ಪಟ್ಟು’

*ಮದ್ದಿಲ್ಲದ ರೋಗ; ಮಧ್ಯಂತರ ರಾಗ

*ಈಗೇಕೆ ಸಿಡಿಯಿತು ದೇವೇಗೌಡರ ‘ಮಧ್ಯಂತರ ಚುನಾವಣೆ’ ಬಾಂಬ್

*ಸಾಕಾಗಿದೆ, ಏನಾದರೂ ಮಾಡಿಕೊಳ್ಳಲಿ: ಸಿದ್ದರಾಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.