ಬೆಂಗಳೂರು: ದ್ವಿತೀಯ ಪಿಯು ಮೊದಲ ದಿನದ ಕನ್ನಡ ಮತ್ತು ಅರೇಬಿಕ್ ಭಾಷಾ ಪರೀಕ್ಷೆ ಸೂಸೂತ್ರವಾಗಿ ನಡೆದಿದೆ.

ನೋಂದಾಯಿಸಿಕೊಂಡಿದ್ದ 5.09 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ 96.87ರಷ್ಟು ವಿದ್ಯಾರ್ಥಿಗಳು (4.93 ಲಕ್ಷ) ಪರೀಕ್ಷೆ ಬರೆದರು.

ಒಂದು ಕಾಲೇಜಿನ ವಿದ್ಯಾರ್ಥಿಗಳನ್ನು ಮತ್ತೊಂದು ಕಾಲೇಜಿನ ಕೇಂದ್ರಕ್ಕೆ ಹಂಚಿಕೆ ಮಾಡಿದ್ದರಿಂದ ಬೆಳಿಗ್ಗೆ 9ಕ್ಕೆ ಮಕ್ಕಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಫಲಕಗಳಲ್ಲಿ ತಮ್ಮ ನೋಂದಣಿ ಸಂಖ್ಯೆ ನೋಡಿಕೊಂಡು ಆಯಾ ಕೊಠಡಿಗಳಿಗೆ ತೆರಳಿ ತಮ್ಮ ಆಸನಗಳಲ್ಲಿ ಕುಳಿತು ಪರೀಕ್ಷೆ ಎದುರಿಸಿದರು. ವಿದ್ಯಾರ್ಥಿಗಳನ್ನು ಬಿಡಲು ಹೆಚ್ಚನ ಸಂಖ್ಯೆಯ ಪೋಷಕರು ಆಗಮಿಸಿದ ಕಾರಣ ಪರೀಕ್ಷಾ ಕೇಂದ್ರದ ಹೊರಗೆ ಜನಸಂದಣಿ ನೆರೆದಿತ್ತು.

1,217 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಮಕ್ಕಳನ್ನು ಮೊದಲೇ ಮಾನಸಿಕವಾಗಿ ಸಿದ್ಧಗೊಳಿಸಿದ್ದರಿಂದ ಭಯಮುಕ್ತವಾಗಿ, ಆತ್ಮಸ್ಥೈರ್ಯದಿಂದ ಮಕ್ಕಳು ಪರೀಕ್ಷೆ ಎದುರಿಸಿದರು. ವಿವಿಧ ಹಂತದ ಅಧಿಕಾರಿಗಳು ವೆಬ್ಕಾಸ್ಟಿಂಗ್ ಮೂಲಕ ಪರೀಕ್ಷಾ ಚಟುವಟಿಕೆಗಳ ಮೇಲೆ ನಿರಂತರ ನಿಗಾವಹಿಸಿದ್ದರು. ಮೊದಲ ದಿನ ನಕಲು ಮಾಡಿದ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಪರೀಕ್ಷಾ ಕೇಂದ್ರದ ಹೊರಗೂ ಕಟ್ಟುನಿಟ್ಟಿನ ಕಣ್ಗಾವಲಿತ್ತು. ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.