ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಭದ್ರತಾ ಲೋಪ: ಮನೋರಂಜನ್ ಸಹಪಾಠಿ ಸಾಯಿಕೃಷ್ಣ ತೀವ್ರ ವಿಚಾರಣೆ

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬಾಗಲಕೋಟೆ: ಲೋಕಸಭೆ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಆರೋಪಿ ಡಿ. ಮನೋರಂಜನ್ ಸಹಪಾಠಿ ಸಾಯಿಕೃಷ್ಣ ಜಗಲಿ ಅವರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು, ಹೈದರಾಬಾದ್‌ ಮೂಲಕ ದೆಹಲಿಗೆ ಕರೆದೊಯ್ದಿದ್ದಾರೆ.

‘ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಇಬ್ಬರೂ ಸಹಪಾಠಿಗಳಾಗಿದ್ದರು. ಇಬ್ಬರೂ ಸಂಪರ್ಕದಲ್ಲಿರುವುದು ಮನೋರಂಜನ್‌ ಕರೆಗಳ ವಿವರದಿಂದ ಗೊತ್ತಾಗಿದೆ. ಇಬ್ಬರ ನಡುವೆ ಯಾವ ರೀತಿಯ ಸಂಪರ್ಕವಿತ್ತು? ಯಾವ ವಿಷಯ ಚರ್ಚೆಯಾಗುತ್ತಿತ್ತು? ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ವಿಷಯ ಚರ್ಚೆಯಾಗಿತ್ತೇ? ಅದರಲ್ಲಿ ಇವರ ಪಾತ್ರವೇನಾದರೂ ಇತ್ತೇ ಎಂಬ ಬಗ್ಗೆ ವಿಚಾರಣೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

ಮನೋರಂಜನ್‌ಗೆ ಯಾವುದೇ ಕೆಲಸ ಇರಲಿಲ್ಲ. ಕಂಪನಿಯೊಂದರ ಹಿರಿಯ ಎಂಜಿನಿಯರ್ ಸಾಯಿಕೃಷ್ಣ ಕಡೆಯಿಂದ ಆರ್ಥಿಕ ನೆರವು ಸಿಗುತ್ತಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗಿದೆ’ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT