ಬೆಂಗಳೂರು: ‘ಮೋಟಾರಿಂಗ್ ವರ್ಲ್ಡ್ ಮ್ಯಾಗಜಿನ್ ಆಫ್ ಡೆಲ್ಲಿ ಪ್ರೆಸ್ ಗ್ರೂಪ್’ ಆಯೋಜಿಸಿದ್ದ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ ಕಾರ್ಯಕ್ರಮದಲ್ಲಿ ರಾಜ್ಯವು ನಾಲ್ಕು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ) ವಿದ್ಯುತ್ ಚಾಲಿತ ವಾಹನಗಳಿಗೆ ಅನುಕೂಲ ಮಾಡಿಕೊಡಲು 6,000ಕ್ಕೂ ಅಧಿಕ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸಿದೆ. ಇದು ದೇಶದಲ್ಲಿಯೇ ಅಧಿಕವಾಗಿರುವ ಕಾರಣ ಬೆಸ್ಕಾಂ ಅನ್ನು ಚಿನ್ನದ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿ ಹಾಗೂ ವಿದ್ಯುದ್ದೀಕರಣದಲ್ಲಿ ಮೇಲುಗೈ ಸಾಧಿಸಿದ್ದಕ್ಕಾಗಿ ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯು ಬೆಳ್ಳಿ ಪ್ರಶಸ್ತಿ ಹಾಗೂ ವಿದ್ಯುತ್ ಚಾಲಿತ ನಾಲ್ಕು ಚಕ್ರ ವಾಹನಗಳ ನೋಂದಣಿ ಹಾಗೂ ವಿದ್ಯುದ್ದೀಕರಣದಲ್ಲಿ ಶೇ 6ರಷ್ಟು ಸಾಧನೆ ಮಾಡಿದ್ದಕ್ಕಾಗಿ ಬೆಳ್ಳಿ ಪ್ರಶಸ್ತಿಯನ್ನು ಪಡೆಯಿತು.

ಬೆಂಗಳೂರು ನಗರದಲ್ಲಿ 1,500ಕ್ಕೂ ಅಧಿಕ ವಿದ್ಯುತ್ ಚಾಲಿತ ಬಸ್ಗಳನ್ನು ಒಪ್ಪಂದದ ಆಧಾರದಲ್ಲಿ ಕಾರ್ಯಾಚರಣೆಗೊಳಿಸಿದ್ದಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಬೆಳ್ಳಿ ಪ್ರಶಸ್ತಿ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.