ಬೆಂಗಳೂರು: 2006, 2008 ಮತ್ತು 2010ನೇ ಸಾಲಿನ ಒಟ್ಟು 23 ಕೆಎಎಸ್ ಅಧಿಕಾರಿಗಳಿಗೆ ‘ಐಎಎಸ್’ ಶ್ರೇಣಿಗೆ ಬಡ್ತಿ ನೀಡಲಾಗಿದೆ. 2016ರ ಸಾಲಿನಲ್ಲಿ 10, 2017ರಲ್ಲಿ ಇಬ್ಬರು, 2018ರಲ್ಲಿ ಮೂವರು, 2019ರಲ್ಲಿ 8 ಅಧಿಕಾರಿಗಳು ಪದೋನ್ನತಿ ಹೊಂದಿದ್ದಾರೆ.

ಜ್ಯೇಷ್ಠತೆ ಆಧಾರದಲ್ಲಿ ಐಎಎಸ್ (ಕರ್ನಾಟಕ ಕೇಡರ್) ಶ್ರೇಣಿಗೆ ಪದೋನ್ನತಿ ನೀಡಲು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) 2020ರ ಡಿ. 29ರಂದು ಆಯ್ಕೆ ಸಮಿತಿ ಸಭೆ (ಎಸ್‌ಸಿಎಂ) ನಡೆಸಿತ್ತು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಬಡ್ತಿ ಪಡೆದ ಅಧಿಕಾರಿಗಳ ಹೆಸರುಗಳನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.

ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಪ್ರಕಾರ, 2016ರ ಸಾಲಿನಲ್ಲಿ 12, 2017ರಲ್ಲಿ ಇಬ್ಬರು, 2018ರಲ್ಲಿ ಮೂವರು, 2019ರಲ್ಲಿ 9 ಹೀಗೆ ಒಟ್ಟು 26 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದೋನ್ನತಿ ಹೊಂದಲು ಅವಕಾಶ ಇತ್ತು. ಆದರೆ, ಅಧಿಕಾರಿಗಳ ಸೇವಾ ಜ್ಯೇಷ್ಠತೆ ಮತ್ತು ರಹಸ್ಯ ವರದಿಯ ಸೂಕ್ಷ್ಮ ಪರಿಶೀಲನೆಯ ಬಳಿಕ ಮೂವರ ಹೆಸರನ್ನು ಕೈ ಬಿಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮೂಲಗಳು ತಿಳಿಸಿವೆ.

ಐಎಎಸ್‌ಗೆ ಬಡ್ತಿ ಪಡೆದವರು: 2016ರ ಪಟ್ಟಿ–ಝೆಹೇರಾ ನಸೀಮ್, ವಿಜಯ ಮಹಂತೇಶ್ ಬಿ. ದಾನಮ್ಮನವರ, ಗೋವಿಂದ ರೆಡ್ಡಿ, ಪ್ರಭುಲಿಂಗ ಕವಳಿಕಟ್ಟಿ, ಎಂ.ಎಲ್. ವೈಶಾಲಿ , ಎಸ್. ರಮ್ಯಾ , ಎಸ್.ಎನ್.ಬಾಲಚಂದ್ರ , ಡಿ.ಭಾರತಿ , ಎ.ಎಂ.ಯೋಗೇಶ್ , ಪಿ.ಆರ್. ಶಿವಪ್ರಸಾದ್ .

2017ರ ಪಟ್ಟಿ– ಜಿ.ಎಂ.ಗಂಗಾಧರಸ್ವಾಮಿ , ಕೆ.ವಿದ್ಯಾಕುಮಾರಿ

2018ರ ಪಟ್ಟಿ– ಕೆ. ನಾಗೇಂದ್ರ ಪ್ರಸಾದ್ , ಕುಮಾರ, ಟಿ. ವೆಂಕಟೇಶ್ .

2019ರ ಪಟ್ಟಿ– ಕೆ.ಎಂ. ಗಾಯಿತ್ರಿ , ಬಿ.ಆರ್.ಪೂರ್ಣಿಮಾ , ಜಯವಿಭವಸ್ವಾಮಿ, ಸಂಗಪ್ಪ, ಸುರೇಶ್ ಬಿ. ಹಿಟ್ನಾಳ, ಜಿ. ಪ್ರಭು , ಡಾ. ಕೆ.ಎನ್. ಅನುರಾಧಾ, ಎನ್.ಎಂ.ನಾಗರಾಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.