ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಾಯಿ ಅಂಗಡಿಗೆ ಬೆಂಕಿ ಇಡಿ, ನಾನಿದ್ದೇನೆ.. ಕೈ ಶಾಸಕ KC ವೀರೇಂದ್ರ ಪ್ರಚೋದನೆ

ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗ್ರಾಮಕ್ಕೆ ಭೇಟಿ ನೀಡಿದಾಗ ಘಟನೆ
Published 6 ಆಗಸ್ಟ್ 2023, 4:57 IST
Last Updated 6 ಆಗಸ್ಟ್ 2023, 4:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಕ್ರಮ ಮದ್ಯ ಮಾರಾಟ ಮಾಡುವವರ ಮನೆಗೆ ಬೆಂಕಿ ಇಡಿ, ಏಕೆ ಯೋಚನೆ ಮಾಡುತ್ತೀರಿ ಎಂದು ಶಾಸಕ ಕೆ.ಸಿ.ವೀರೇಂದ್ರ ಮಹಿಳೆಯರಿಗೆ ಹೇಳಿದ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ.

ತಾಲ್ಲೂಕಿನ ಹಿರೇಗುಂಟನೂರು ಗ್ರಾಮಕ್ಕೆ ಈಚೆಗೆ ಭೇಟಿ ನೀಡಿದಾಗ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಹಿಳೆಯರು ನೀಡಿದ ದೂರು‌ ಆಲಿಸಿ ಶಾಸಕರು ಹೀಗೆ ಮಾತನಾಡಿದ್ದಾರೆ.

'ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ತೊಂದರೆ ಉಂಟಾಗಿದೆ. ಕುಡಿದು ಬಂದು ಗಂಡಂದಿರು ನಿತ್ಯ ಮನೆಗಳಲ್ಲಿ ಗಲಾಟೆ ಮಾಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟ ತಡೆಯಲು ಈವರೆಗೆ ಯಾರೂ ಕ್ರಮ ಕೈಗೊಂಡಿಲ್ಲ. ಕೈಮುಗಿಯುತ್ತೇವೆ ಅಕ್ರಮ ಮದ್ಯ ಮಾರಾಟ ತಡೆಯಿರಿ' ಎಂದು ಮಹಿಳೆಯರು ಮನವಿ ಮಾಡಿದ್ದಾರೆ.

'ಇಷ್ಟು ಹೇಳಿದ್ದೇವೆ ಮುಂದೆ ಅವರ‌ ಮನೆಗೆ ಬೆಂಕಿಯಿಡುತ್ತೇವೆ' ಎಂದು ಮಹಿಳೆಯೊಬ್ಬರು ಹೇಳಿದಾಗ, 'ನೀನು ಇಡಮ್ಮ ನಾನಿದ್ದೇನೆ, ಯಾಕೆ ಯೋಚನೆ ಮಾಡ್ತಿಯಾ' ಎಂದ ಶಾಸಕರು ಪ್ರತಿಕ್ರಿಸಿದ ಮಾತು ವಿಡಿಯೊದಲ್ಲಿದೆ.

'ಹಾಸ್ಟೆಲ್ ವಾರ್ಡನ್ ಗೆ ಬಡಿಯಿರಿ' ಎಂದು ಶಾಸಕ ವೀರೇಂದ್ರ ಪ್ರಚೋದನೆ ನೀಡಿದ ವಿಡಿಯೊ ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT