ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು, ವಿಮಾನಗಳಲ್ಲಿ ‘ಗುಡ್‌ಲೈಫ್‌’: ಹಾಸನ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ

Last Updated 1 ಜುಲೈ 2022, 21:10 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ರೈಲು ಮತ್ತು ವಿಮಾನಗಳಿಗೆಇದೇ ಮೊದಲ ಬಾರಿ ಹಾಸನ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ‘ನಂದಿನಿ ಗುಡ್‌ಲೈಫ್‌’ ಸುವಾಸಿತ ಹಾಲು ಸರಬರಾಜು ಮಾಡುವುದನ್ನು ಆರಂಭಿಸಲಾಗಿದೆ.

ಸುಮಾರು ₹170 ಕೋಟಿ ಬಂಡವಾಳದಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಸಂಪೂರ್ಣ ಸ್ವಯಂ ಚಾಲಿತ ವಿದ್ಯುನ್ಮಾನ ನಿಯಂತ್ರಿತ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಪೆಟ್‌ಬಾಟಲ್‌ ಬೃಹತ್‌ ಸ್ಥಾವರನ್ನು ಸ್ಥಾಪಿಸಲಾಗಿದೆ. ಫೆಬ್ರುವರಿಯಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ದಿನ 5 ಲಕ್ಷ ಬಾಟಲ್‌ಗಳವರೆಗೆ ಉತ್ಪಾದನೆ ಮಾಡಲಾಗುತ್ತಿದೆ.

ಈ ಸ್ವಯಂ ಚಾಲಿತ ಸ್ಥಾವರದಲ್ಲಿ‘ನಂದಿನಿ ಗುಡ್‌ಲೈಫ್‌’ ಉಪ ಬ್ರ್ಯಾಂಡ್‌ನಲ್ಲಿ ಬಾದಾಮಿ, ಪಿಸ್ತಾ, ಸ್ಟ್ರಾಬೆರಿ ಸುವಾಸಿತ ಹಾಲು, ಲಸ್ಸಿ, ಚಾಕೊಲೇಟ್‌, ವೆನಿಲ್ಲಾ, ಬನಾನಾ ಮಿಲ್ಕ್‌ ಶೇಕ್‌, ಮಸಾಲ ಮಜ್ಜಿಗೆ ತಯಾರಿಸಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತೀಯ ರೈಲಿಗೆ ಪ್ರತಿ ತಿಂಗಳು 3 ಲಕ್ಷ ಲೀಟರ್‌ ಬೇಡಿಕೆ ಇದೆ. ಬೇಸಿಗೆ ಕಾಲದಲ್ಲಿ 5 ಲಕ್ಷದಿಂದ 6 ಲಕ್ಷ ಲೀಟರ್‌ ಬೇಡಿಕೆ ಇದೆ.

ಹಾಸನ ಹಾಲು ಒಕ್ಕೂಟದಅಧ್ಯಕ್ಷ ಮತ್ತು ಶಾಸಕ ಎಚ್‌.ಡಿ. ರೇವಣ್ಣ ಅವರು 3.75 ಲಕ್ಷ ಲೀಟರ್‌ ಬಾಟಲ್‌ ಸಾಗಿಸುವ ಹಾಲಿನ ವಾಹನಗಳಿಗೆ ಶುಕ್ರವಾರ ಹಾಸನದಲ್ಲಿ ಹಸಿರು ನಿಶಾನೆ ತೋರಿದರು.

ವಿಸ್ತಾರಾ ಮತ್ತು ಏರ್‌ ಇಂಡಿಯಾ ಸಂಸ್ಥೆಗಳ ವಿಮಾನಗಳಲ್ಲೂಪೆಟ್‌ ಬಾಟಲ್‌ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ.
ಪೆಟ್‌ ಬಾಟಲ್‌ ಪೂರೈಸುವ ವಾಹನಗಳಿಗೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಅವರು ಹಸಿರು ನಿಶಾನೆ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT