ನವದೆಹಲಿ: ಉಡಾನ್ ಯೋಜನೆಯಡಿ ಬಳ್ಳಾರಿ ಹಾಗೂ ಕೋಲಾರ ಏರ್ಸ್ಟ್ರಿಪ್ಗಳಲ್ಲಿ ಸಣ್ಣ ವಿಮಾನಗಳ ಕಾರ್ಯಾಚರಣೆಗಾಗಿ (20 ಸೀಟುಗಳಿಗಿಂತ ಕಡಿಮೆ) ಬಿಡ್ಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳಿಧರ್ ಮೊಹೊಲ್, ́ಈ ವಿಮಾನ ನಿಲ್ದಾಣಗಳ ಆರಂಭಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ. ಜತೆಗೆ, ಭೂಮಿಯ ಲಭ್ಯತೆಯನ್ನು ಖಚಿತಪಡಿಸುವಂತೆ ತಿಳಿಸಲಾಗಿದೆ. ರಾಜ್ಯ ಸರ್ಕಾರವು ಉಚಿತವಾಗಿ ಭೂಮಿ ಒದಗಿಸಬೇಕುʼ ಎಂದಿದ್ದಾರೆ.

ಈ ನಿಲ್ದಾಣದಲ್ಲಿ ಆರಂಭಿಕ ಹಂತದಲ್ಲಿ ಸಣ್ಣ ವಿಮಾನಗಳ ಕಾರ್ಯಾಚರಣೆ ಮಾಡಲಾಗುವುದು. ಭವಿಷ್ಯದಲ್ಲಿ ನಿಲ್ದಾಣದ ವಿಸ್ತರಣೆಗೆ ಅವಕಾಶ ಇರಬೇಕು. ಅಂತಹ ಜಾಗ ಗುರುತಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಯಚೂರು, ಕುಶಾಲನಗರ ಹಾಗೂ ಹಾಸನದಲ್ಲಿ ಏರ್ಸ್ಟ್ರಿಪ್ಗಳ ನಿರ್ಮಾಣಕ್ಕೆ ಯಾವುದೇ ಬಿಡ್ ಸ್ವೀಕಾರ ಆಗಿಲ್ಲ ಎಂದು ಅವರು ಸ್ಟಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.