ಬೆಂಗಳೂರು: 2023–24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 384 ಹುದ್ದೆಗಳಿಗೆ ನೇಮಕಾತಿಗೆ ಮೇ 3, 5, 7 ಮತ್ತು 9ರಂದು ಮುಖ್ಯ ಪರೀಕ್ಷೆ ನಡೆಸಲು ಕೆಪಿಎಸ್ಸಿ ನಿರ್ಧರಿಸಿದ್ದು, ಪರೀಕ್ಷಾ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.

ಅರ್ಹತಾ ಪರೀಕ್ಷೆ ಕನ್ನಡ ಮೇ 3ರಂದು ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ, ಇಂಗ್ಲಿಷ್ ಪರೀಕ್ಷೆ ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದೆ.

ಪತ್ರಿಕೆ– 1 (ಪ್ರಬಂಧ) ಮೇ 5ರಂದು ಬೆಳಿಗ್ಗೆ 10ರಿಂದ 1, ಪತ್ರಿಕೆ 2 (ಸಾಮಾನ್ಯ ಅಧ್ಯಯನ– 1) ಮೇ 7ರಂದು ಬೆಳಿಗ್ಗೆ 9ರಿಂದ 12, ಪತ್ರಿಕೆ 3 (ಸಾಮಾನ್ಯ ಅಧ್ಯಯನ–2) ಮೇ 7ರಂದು ಮಧ್ಯಾಹ್ನ 2ರಿಂದ 5, ಪತ್ರಿಕೆ 4 (ಸಾಮಾನ್ಯ ಅಧ್ಯಯನ–3) ಮೇ 9ರಂದು ಬೆಳಿಗ್ಗೆ 9ರಿಂದ 12, ಪತ್ರಿಕೆ 5 (ಸಾಮಾನ್ಯ ಅಧ್ಯಯನ–4) ಮೇ 9ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ, ವೇಳಾ ಪಟ್ಟಿಯನ್ನು ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ರಮಣದೀಪ್ ಚೌಧರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.