ಈ ವಯೋಮಿತಿ ಸಡಿಲಿಕೆಯು ಒಂದು ಬಾರಿ ಮಾತ್ರ ಅನ್ವಯವಾಗಲಿದ್ದು, ಈಗಾಗಲೇ ಹೊರಡಿಸಲಾಗಿರುವ ನೇರ ನೇಮಕಾತಿ ಅಧಿಸೂಚನೆಗಳು ಮತ್ತು ಮುಂದಿನ ಒಂದು ವರ್ಷದಲ್ಲಿ ನಡೆಯಲಿರುವ ನೇಮಕಾತಿಗಳಲ್ಲಿ ಇದನ್ನು ಪಾಲಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಈ ಕಾರಣದಿಂದ ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.