ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಹುದ್ದೆಗಳು ವಯೋ ನಿವೃತ್ತಿ, ಸ್ವಯಂ ನಿವೃತ್ತಿ, ರಾಜೀನಾಮೆ, ನಿಧನ ಮತ್ತಿತರ ಕಾರಣಗಳಿಂದ ಖಾಲಿ ಆಗುತ್ತಿದ್ದರೂ ಆ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಆಮೆಗತಿಯಲ್ಲಿದೆ. ಹೀಗಾಗಿ, ಖಾಲಿ ಹುದ್ದೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.

2022ರ ಅಂತ್ಯದವರೆಗೆ ಮಂಜೂರಾಗಿದ್ದ ಒಟ್ಟು 7,69,981 ಹುದ್ದೆಗಳ ಪೈಕಿ 2,58,709 ಹುದ್ದೆಗಳು ಖಾಲಿ ಇದ್ದವು. 2025–26ರವರೆಗೆ ವಿವಿಧ 43 ಇಲಾಖೆಗಳಲ್ಲಿ ಒಟ್ಟು 7,76,414 ಹುದ್ದೆಗಳು ಇವೆ ಎಂದು ‘ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ’ನಲ್ಲಿ (ಎಚ್ಎಂಆರ್ಎಸ್ ತಂತ್ರಾಂಶ) ನಮೂದಿಸಲಾಗಿದೆ. ಈ ಪೈಕಿ, 4,91,533 ಹುದ್ದೆಗಳು ಭರ್ತಿಯಾಗಿದ್ದು, 2,84,881 ಖಾಲಿ ಇವೆ.

ಕಳೆದ ಐದು ವರ್ಷಗಳಲ್ಲಿ (2020–2024) ಕರ್ನಾಟಕ ಲೋಕಸೇವಾ ಆಯೋಗವು ಖಾಲಿ ಇರುವ ವಿವಿಧ ವೃಂದಗಳ 9,467 ಹುದ್ದೆಗಳಿಗೆ ನೇಮಕಾತಿಗಾಗಿ 67 ಅಧಿಸೂಚನೆಗಳನ್ನು ಹೊರಡಿಸಿದೆ. ಅದರಲ್ಲಿ ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನ ಪೂರ್ಣಗೊಂಡಿರುವ ಹುದ್ದೆಗಳ ಸಂಖ್ಯೆ 6,055. 2,850 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಬಾಕಿಯಿದೆ.

ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಡುವಂತೆ ನೇಮಕಾತಿ ಪ್ರಾಧಿಕಾರಿಗಳಿಗೆ ಪ್ರಸ್ತಾವಗಳನ್ನು ಕಳುಹಿಸಿದರೂ ಅಧಿಸೂಚನೆ ಹೊರಡಿಸುವುದು, ಲಿಖಿತ ಪರೀಕ್ಷೆ, ಸಂದರ್ಶನ ಮತ್ತಿತರ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದ ಹುದ್ದೆಗಳ ಭರ್ತಿಗೆ ಸುದೀರ್ಘ ಅವಧಿ ತೆಗೆದುಕೊಳ್ಳುತ್ತಿದೆ ಎನ್ನುವುದು ಕೆಲವು ಇಲಾಖೆಗಳ ಮುಖ್ಯಸ್ಥರ ಆರೋಪ.

ಆರ್ಥಿಕ ಮಿತವ್ಯಯ ಜಾರಿಯಲ್ಲಿದ್ದರೂ ನೇರ ನೇಮಕಾತಿ ಹುದ್ದೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳಿಂದ ಸ್ವೀಕೃತವಾಗುವ ಪ್ರಸ್ತಾವಗಳನ್ನು ಪರಿಶೀಲಿಸಿ, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಮತ್ತು ಇಲಾಖೆಗೆ ನಿಗದಿಪಡಿಸಿರುವ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗುತ್ತಿದೆ ಎಂದು ಆರ್ಥಿಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಗ್ರೂಪ್ ಸಿ ವೃಂದದ ಕೆಲವು ಹುದ್ದೆ (ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್ ಡಿ ವೃಂದ) ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಡಿಪಿಎಆರ್) 2005ರಲ್ಲಿಯೇ ಸೂಚನೆ ನೀಡಿದೆ. ಅದರಂತೆ ಮಂಜೂರಾದ ಖಾಲಿ ಹುದ್ದೆಗಳಿಗೆ ಎದುರಾಗಿ ಅಂದಾಜು 80,005 ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಅಲ್ಲದೆ, ಮಂಜೂರಾಗಿ ಖಾಲಿ ಇರುವ ಹುದ್ದೆಗಳ ಎದುರಾಗಿ ಅರ್ಹ ಸಿಬ್ಬಂದಿ, ಅಧಿಕಾರಿಗಳನ್ನು ಹೆಚ್ಚುವರಿ ಪ್ರಭಾರದಲ್ಲಿರಿಸಿ, ಪ್ರಭಾರ ಭತ್ಯೆಯನ್ನೂ ನೀಡಲಾಗುತ್ತಿದೆ ಎಂದರು.

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಕಾರಣಕ್ಕೆ, ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸತಾಗಿ ಯಾವುದೇ ಅಧಿಸೂಚನೆ ಹೊರಡಿಸಬಾರದೆಂದು ಡಿಪಿಎಆರ್ 2024ರ ನ. 25ರಂದು ಸುತ್ತೋಲೆ ಹೊರಡಿಸಿದೆ. ಹೀಗಾಗಿ ಕಳೆದ ಒಂಬತ್ತು ತಿಂಗಳಿನಿಂದ ಯಾವುದೇ ಇಲಾಖೆಗಳು ಹೊಸ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ. ಅಲ್ಲದೆ, ನೇಮಕಾತಿ ಪ್ರಾಧಿಕಾರಗಳು ಹೊಸ ಅಧಿಸೂಚನೆಯನ್ನು ಹೊರಡಿಸಿಲ್ಲ. ನ. 25ಕ್ಕೂ ಮೊದಲು ಹೊರಡಿಸಿದ್ದ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಮಾತ್ರ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದೂ ತಿಳಿಸಿದರು.

‘ಕೆಪಿಎಸ್ಸಿಯಲ್ಲಿ ಸದಸ್ಯರ ನಡುವಿನ ಭಿನ್ನಮತದಿಂದಾಗಿ ನಿಯಮಿತವಾಗಿ ಸಭೆ ನಡೆಯದ ಕಾರಣ ಹುದ್ದೆಗಳ ಭರ್ತಿಗೆ ತೊಂದರೆ ಆಗಿತ್ತು. ಆದರೆ, ಸದ್ಯ ಅಂತಹ ಯಾವುದೇ ಭಿನ್ನಮತ ಇಲ್ಲ. ಹೀಗಾಗಿ ಪ್ರತಿ ಮಂಗಳವಾರ ಆಯೋಗದ ಸಭೆ ನಡೆಯುತ್ತಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡಿರುವ ಹುದ್ದೆಗಳ ತಾತ್ಕಾಲಿಕ, ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಚಟುವಟಿಕೆ ಮುಂದುವರಿದಿದೆ’ ಎಂದು ಕೆಪಿಎಸ್ಸಿ ಮೂಲಗಳು ತಿಳಿಸಿವೆ.

ಹೈಕೋರ್ಟ್ ಮೆಟ್ಟಿಲಲ್ಲಿ ಶೇ 56ರಷ್ಟು ಮೀಸಲು

ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಜಾತಿವಾರು ಶೇ 56 ಮೀಸಲಾತಿ ನೀಡುವ ಸವಾಲು ರಾಜ್ಯ ಸರ್ಕಾರಕ್ಕೆ ಎದುರಾಗಿದೆ.

1995 ಜ. 31ರ ಸರ್ಕಾರದ ಆದೇಶದ ಅನ್ವಯ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ವರ್ಗ (ಎಸ್ಟಿ) ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೇರ ನೇಮಕಾತಿಯಲ್ಲಿ ಶೇ 50 (ಪ್ರವರ್ಗ 1–4, 2ಎ–15, 2ಬಿ–4, 3ಎ–4, 3ಬಿ–5, ಎಸ್ಸಿ–15, ಎಸ್ಟಿ–3) ಮೀಸಲಾತಿ ಪ್ರಮಾಣ ನಿಗದಿಪಡಿಸಲಾಗಿತ್ತು. 2022ರಲ್ಲಿ ರೂಪಿಸಿದ ಕಾಯ್ದೆಯ ಅನ್ವಯ ಎಸ್ಸಿ ಮೀಸಲಾತಿ ಶೇ 15ರಿಂದ 17, ಎಸ್ಟಿ ಮೀಸಲಾತಿ ಶೇ 3ರಿಂದ 7ಕ್ಕೆ ಹೆಚ್ಚಿಸಿ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 56ಕ್ಕೆ ಹೆಚ್ಚಿಸಲಾಗಿದೆ. ಅದರಂತೆ, 100 ಬಿಂದುಗಳ ರೋಸ್ಟರ್ (ನೇಮಕಾತಿಗೆ ಮೀಸಲು ಬಿಂದು ನಿಗದಿಪಡಿಸಿದ ಪಟ್ಟಿ) ಪರಿಷ್ಕರಿಸಿ ಸರ್ಕಾರವು 2022ರ ಡಿಸೆಂಬರ್ 28ರಂದು ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಇದೇ ಮೇ 28ರಂದು ಅನೂರ್ಜಿತಗೊಳಿಸಿರುವ ಕೆಎಟಿ, ಈ ಆದೇಶದ ಅನ್ವಯ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಹುದ್ದೆಗಳನ್ನು ಪ್ರವರ್ಗವಾರು ವರ್ಗೀಕರಿಸಿ ಕೆಪಿಎಸ್ಸಿ ಹೊರಡಿಸಿದ್ದ ಅಧಿಸೂಚನೆ ಯನ್ನೂ ರದ್ದುಪಡಿಸಿದೆ (ಇಡೀ ನೇಮಕಾತಿ ಅಧಿಸೂಚನೆಯನ್ನು ಕೆಎಟಿ ರದ್ದು ಪಡಿಸಿಲ್ಲ). ಈ ಆದೇಶದಂತೆ ರೋಸ್ಟರ್ ಬಿಂದು ಗುರುತಿಸಿ ನೇಮಕಾತಿ ಪ್ರಕ್ರಿಯೆ ಕೈಗೊಂಡಿರುವ ಎಲ್ಲ ನೇಮಕಾತಿ ಅಧಿಸೂಚನೆಗಳ ಮೇಲೂ ಕೆಎಟಿ ತೀರ್ಪು ಪರಿಣಾಮ ಬೀರಲಿರುವ ಕಾರಣ, ಈ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಜುಲೈ 31ರಂದು ಈ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘384 ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು ಕೆಪಿಎಸ್ಸಿ ಮುಂದುವರಿಸಬಹುದು. ಆದರೆ, ಕೋರ್ಟ್ ಅನುಮತಿ ಇಲ್ಲದೆ ಆಯ್ಕೆ ಫಲಿತಾಂಶ ಪ್ರಕಟಿಸಬಾರದು’ ಎಂದು ಮಧ್ಯಂತರ ಆದೇಶ ನೀಡಿದೆ. ಹೀಗಾಗಿ, ಪರೀಕ್ಷೋತ್ತರ ಮೌಲ್ಯಮಾಪನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೆಪಿಎಸ್ಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.