ಸುವರ್ಣ ವಿಧಾನಸೌಧ (ಬೆಳಗಾವಿ): ‘ನನ್ನ ವಿರುದ್ದದ ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೂ ಸಿದ್ಧ. ಯಾವ ರೀತಿಯ ತನಿಖೆ ಆಗಬೇಕು ಎಂಬುದನ್ನು ವಿರೋಧ ಪಕ್ಷದ ನಾಯಕರು ಮತ್ತು ಸಭಾನಾಯಕರು ಸೇರಿ ತೀರ್ಮಾನಿಸಲಿ. ನಾನು ತಯಾರಿದ್ದೇನೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದರು.

ಕೋಲಾರ ತಾಲ್ಲೂಕು ಗರುಡುಪಾಳ್ಯ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ವಿಧಾನಸಭೆಯಲ್ಲಿ ಶುಕ್ರವಾರ ಅವರು ಸ್ವಯಂಪ್ರೇರಿತ ಹೇಳಿಕೆ ನೀಡಿದರು.

‘ಒಂದು ವೇಳೆ ಒತ್ತುವರಿ ಆಗಿದೆ ಎಂಬುದು ಸಾಬೀತಾದರೆ ಆ ಭೂಮಿ ಸರ್ಕಾರಕ್ಕೆ ಬಿಟ್ಟು ಕೊಡಲು ಸಿದ್ಧ’ ಎಂದು ಅವರು ವಿರೋಧ ಪಕ್ಷದವರಿಗೆ ಸವಾಲು ಹಾಕಿದರು.

ಹೇಳಿಕೆಯ ವಿವರ: ‘ಗರುಡಪಾಳ್ಯ ಗ್ರಾಮವು ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ ಗ್ರಾಮವಾಗಿತ್ತು. 1923 ರಲ್ಲಿ ಅವರು ಅಲ್ಲಿ ಕೃಷಿ ತರಬೇತಿ ಕೇಂದ್ರ ನಡೆಸುತ್ತಿದ್ದರು. ರಾಸಾಯನಿಕ ಗೊಬ್ಬರವನ್ನು ಹೊರದೇಶದಿಂದ ಆಮದು ಮಾಡಿ, ರೈತರಿಗೆ ಪರಿಚಯ ಮಾಡಿಸುವ ಕೇಂದ್ರವಾಗಿ ನಡೆಸುತ್ತಿದ್ದರು. ಇದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಸೇರಿದ ಜಮೀನು. ಇದರ ವ್ಯವಹಾರವನ್ನು ಮಹಾರಾಜರ ಕಾರ್ಯದರ್ಶಿ ನಾರಾಯಣಸ್ವಾಮಿ ಅವರು ನೋಡಿಕೊಳ್ಳುತ್ತಿದ್ದರು. ಅದನ್ನು ನಾರಾಯಣಸ್ವಾಮಿ ಅವರು 1953 ರಲ್ಲಿ ನಮ್ಮ ತಾತ ಚೌಡೇಗೌಡರಿಗೆ 10 ವರ್ಷಗಳ ಭೋಗ್ಯಕ್ಕೆ ನೀಡಿದ್ದರು’ ಎಂದು ಕೃಷ್ಣ ತಿಳಿಸಿದರು.

‘ಭೋಗ್ಯದ ಅವಧಿ ಮುಗಿಯುವುದಕ್ಕೂ ಮೊದಲೇ ರಾಜಮನೆತನದವರು ಆ ಭೂಮಿಯನ್ನು ಮಾರಾಟಕ್ಕೆ ಇಟ್ಟರು. ಚೌಡೇಗೌಡರು ಆ ಜಮೀನು ಖರೀದಿಸುವುದಾಗಿ ಹೇಳಿದರೂ ಸರಿಯಾದ ಸಮಯಕ್ಕೆ ಹಣ ಹೊಂದಿಸಲಾಗಲಿಲ್ಲ. ಆದ್ದರಿಂದ, ಜಮೀನನ್ನು 1959 ರಲ್ಲಿ ಅಬೀಬುಲ್ಲಾ ಖಾನ್ ಅವರಿಗೆ ಮಾರಾಟ ಮಾಡಿದರು. ಅದರ ವಿರುದ್ಧ ನಮ್ಮ ತಾತ ಕೋಲಾರ ವಿಶೇಷ ಜಿಲ್ಲಾಧಿಕಾರಿ ಬಳಿ ದೂರು ದಾಖಲಿಸಿದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಅವರು ಅಬೀಬುಲ್ಲಾ ಖಾನ್ ಅವರೇ ಭೂಮಿ ಮಾಲೀಕರು ಎಂಬ ಆದೇಶ ನೀಡಿದರು’ ಎಂದು ಅವರು ಹೇಳಿದರು.

‘ಗರುಡಪಾಳ್ಯ ಎಂಬ ಇಡೀ ಹಳ್ಳಿಯು ಒಬ್ಬ ಮಾಲೀಕನಿಗೆ ಸೇರಿದ್ದು. ಯಾರೂ ವಾಸ ಮಾಡದೇ ಇರುವ ‘ಬೇಚರಾಗ್’ ಗ್ರಾಮ. ಈ ಹಳ್ಳಿಯು ಶ್ರೀಕಂಠದತ್ತ ಒಡೆಯರ್ ಟ್ರಸ್ಟ್ಗೆ ಸೇರಿದಾಗಿದ್ದು, 1953 ರಲ್ಲಿ ಇಡೀ ಹಳ್ಳಿಯನ್ನು ರಾಜಮನೆತನವು ಭೋಗ್ಯಕ್ಕೆ ನೀಡಿತ್ತು. ಬಳಿಕ ಅಬೀಬುಲ್ಲಾ ಖಾನ್ ಅವರಿಗೆ ₹47,601ಕ್ಕೆ ಮಾರಾಟ ಮಾಡಿದೆ ಎಂದು ಬರೆದಿತ್ತು. ಬಳಿಕ, ಈ ಆದೇಶವನ್ನು ಪ್ರಶ್ನಿಸಿ ಮೈಸೂರು ಮೇಲ್ಮನವಿ ಪ್ರಾಧಿಕಾರಕ್ಕೆ ಚೌಡೇಗೌಡರು ಮೇಲ್ಮನವಿ ದಾಖಲಿಸಿದ್ದರು. ಆಗ, ಅಬೀಬುಲ್ಲಾ ಖಾನ್ ಅವರು ಒಪ್ಪಂದಕ್ಕೆ ಬಂದರು. ಗ್ರಾಮದ ಸಂಪೂರ್ಣ 256 ಎಕರೆ ಒಡೆತನವನ್ನು ಚೌಡೇಗೌಡರಿಗೆ ಬಿಟ್ಟುಕೊಟ್ಟರು. ಇದೆಲ್ಲವೂ ಕ್ರಯಪತ್ರದಲ್ಲಿ ಸ್ಪಷ್ಟವಾಗಿದೆ. ಅಂದಿನಿಂದ ಈವರೆಗೆ ನಾವು ಆ ಜಮೀನು ನಮ್ಮ ಅನುಭವದಲ್ಲಿಯೇ ಇದೆ’ ಎಂದು ವಿವರಿಸಿದರು.

‘ನಮ್ಮ ತಾತನ ಬಳಿಕ ಜಮೀನು ಪಾಲಾಯಿತು. ಸರ್ವೆ ನಂ 46 ಮತ್ತು 47 ನಮ್ಮ ಪಾಲಿಗೆ ಬಂದಿದ್ದು, ಈ ಜಮೀನನ್ನು 2022 ರ ಬಳಿಕ ಅಂದರೆ 2024 ರಲ್ಲಿ ನೋಂದಣಿ ಮಾಡಿಸಿಕೊಂಡಿದ್ದೇವೆ. ಇದರಲ್ಲಿ 20 ಎಕರೆ ಪ್ರದೇಶ ಕಲ್ಲುಗಳಿಂದ ಕೂಡಿದ ಕೆರೆಯ ಪಕ್ಕದಲ್ಲಿ ಕೆರೆಯಿಂದ ಮೇಲ್ಮಟ್ಟದಲ್ಲಿ ಅಂದರೆ 10 ರಿಂದ 15 ಅಡಿ ಮೇಲೆ ‘ಕಲ್ಲು ಗುಟ್ಟ’ ಎಂದು ಇದೆ. ಇದಕ್ಕೆ ಕೆಲವು ವರ್ಷ ಗೋಮಾಳ ಅಂತ ದಾಖಲೆಯಲ್ಲಿ ಬರೆಸಲಾಗಿತ್ತು. ಅದೂ ಕೂಡ ಖರೀದಿ ಮಾಡಿದ್ದ 256 ಎಕರೆಯಲ್ಲಿ ಸೇರಿದೆ. ಸ್ಮಶಾನ ಎಂದು ನಮೂದು ಪುಸ್ತಕದಲ್ಲಿ ಮಾತ್ರ ಇದೆ. ಪಹಣಿ ಸೇರಿದಂತೆ ಇತರೆ ಯಾವುದೇ ದಾಖಲೆಗಳಲ್ಲಿ ಸ್ಮಶಾನದ ನಮೂದು ಇಲ್ಲ. ಇದು ಕಂದಾಯ ಗ್ರಾಮ ಆಗಿದ್ದು, ಒಂದು ಕುಟುಂಬಕ್ಕೆ ಸೇರಿದ್ದಾಗಿದೆ’ ಎಂದು ಸ್ಪಷ್ಟಪಡಿಸಿದರು.

ಕೆರೆಗಳು ಈಗಲೂ ಅಸ್ತಿತ್ವದಲ್ಲಿವೆ...

‘ಈ ಜಮೀನಿನಲ್ಲಿ ಎರಡು ಕೆರೆಗಳಿವೆ. ಅವು ಈಗಲೂ ಅಸ್ತಿತ್ವದಲ್ಲಿವೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು. ‘ಆ ಕಾರಣಕ್ಕಾಗಿಯೇ ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಆ ಕೆರೆಗಳ ಭೂಮಿಯು ನಮ್ಮ ಕುಟುಂಬದ ಹೆಸರಿನಲ್ಲಿದೆ. ಕೆರೆಗಳು ಮತ್ತು ಕೆರೆಗಳಿಗೆ ಹೊಂದಿಕೊಂಡಿರುವ ನಾಲೆಗಳ ಯಾವುದೇ ಇಂದಿಂಚೂ ಭೂಮಿಯನ್ನು ಒತ್ತುವರಿ ಮಾಡಿಲ್ಲ. ಬೇಕಿದ್ದರೆ ವಿರೋಧ ಪಕ್ಷದ ನಾಯಕರು ಮತ್ತು ಮಾಧ್ಯಮದವರು ಬಂದು ಪರಿಶೀಲಿಸಲಿ’ ಎಂದು ಅವರು ಹೇಳಿದರು.

ನಿಷ್ಠುರವಾಗಿ ಕೆಲಸ ಮಾಡುವಾಗ ಅದನ್ನು ಒಪ್ಪುವವರು ಇರುತ್ತಾರೆ. ನಿಷ್ಠುರವಾಗಿ ಕೆಲಸ ಮಾಡಿದ್ದಕ್ಕಾಗಿ ಬಾಧಿತರಾಗುವುದೂ ಇರುತ್ತದೆ. ನಿಷ್ಠುರವಾಗಿ ಕೆಲಸ ಮಾಡುವವರನ್ನು ಸಿಲುಕಿಸಲು ಪ್ರಯತ್ನಿಸುತ್ತಾರೆ
ಕೃಷ್ಣ ಬೈರೇಗೌಡ ಕಂದಾಯ ಸಚಿವ

‘ತನಿಖೆಯಾಗಿ ಸತ್ಯ ಹೊರಬರಲಿ

’ ಜಮೀನು ಕೆರೆಯೊ ಸ್ಮಶಾನವೊ ಎಂಬುದು ತನಿಖೆ ಮಾಡಿಸಲಿ. ನಿಮ್ಮ ಮೇಲೆ ಬಂದಿರುವ ಆರೋಪಗಳಿಂದ ಕಳಂಕರಹಿತರಾಗಿ ಹೊರಬನ್ನಿ. ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೆಯಾಗಲಿ. ಸತ್ಯಾಸತ್ಯತೆ ಹೊರಬರಲಿ. ದಾಖಲೆಗಳನ್ನು ಕೈಯಲ್ಲಿ ಬರೆಯುವಾಗ ತಿದ್ದುಪಡಿ ಆಗಿದೆ. ಒಮ್ಮೆ ಕೆರೆಯಾಗಿದ್ದು ಯಾವಾಗಲೂ ಕೆರೆಯೇ ಎಂಬುದನ್ನು ನೆನಪಿಡಬೇಕು

-ಆರ್.ಅಶೋಕ ವಿರೋಧ ಪಕ್ಷ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.