ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿ ನಿಂಗರಾಜ ಕುಟುಂಬದ ಆಸ್ತಿ ₹3.36 ಕೋಟಿ: ವಾಸಕ್ಕಿಲ್ಲ ಸ್ವಂತ ಮನೆ

Published 15 ಮೇ 2024, 15:34 IST
Last Updated 15 ಮೇ 2024, 15:34 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಈ.ಸಿ. ನಿಂಗರಾಜ ಹಾಗೂ ಅವರ ಪತ್ನಿ ಒಟ್ಟು ₹3.36 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ ವಾಸಕ್ಕೆ ಸ್ವಂತ ಮನೆ ಇಲ್ಲ.

ಅವರ ಬಳಿ ಒಟ್ಟು ₹2.32 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹1.04 ಕೋಟಿ ಮೌಲ್ಯದ ಚರಾಸ್ತಿ ಇದೆ. ಅಭ್ಯರ್ಥಿ ನಿಂಗರಾಜ ಬಳಿ ಕೇವಲ ₹25 ಸಾವಿರ ನಗದು ಇದ್ದು, ಓಡಾಟಕ್ಕೆ ಇನೋವಾ ಕ್ರಿಸ್ಟಾ ಹಾಗೂ ಮಾರುತಿ ಸ್ವಿಫ್ಟ್‌ ಡಿಸೈರ್ ಕಾರ್‌ ಹೊಂದಿದ್ದಾರೆ. 125 ಗ್ರಾಂ ಚಿನ್ನಾಭರಣವಿದೆ. ಅವರ ಪತ್ನಿ ಎಂ. ಜಯಶ್ರೀ ಬಳಿ ಹುಂಡೈ ಐ10 ಕಾರ್‌, 495 ಗ್ರಾಂ ಚಿನ್ನ ಹಾಗೂ 2 ಸ್ಕೂಟರ್‌ ಇದೆ. 495 ಗ್ರಾಂ ಚಿನ್ನ ಹಾಗೂ 4 ಕೆ.ಜಿ. ಬೆಳ್ಳಿ ಹೊಂದಿದ್ದಾರೆ.

ನಿಂಗರಾಜ ಬಳಿ ₹1.15 ಕೋಟಿ ಮೌಲ್ಯದ 5 ನಿವೇಶನ ಹಾಗೂ ಅವರ ಮಡದಿ ಬಳಿ ₹1.17 ಕೋಟಿ ಮೌಲ್ಯದ 3 ನಿವೇಶನಗಳಿವೆ. ನಿಂಗರಾಜ ವಿವಿಧ ಬ್ಯಾಂಕುಗಳಲ್ಲಿ ₹37 ಲಕ್ಷ ಸಾಲ ಮಾಡಿದ್ದಾರೆ.

ನಿಂಗರಾಜ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅವರ ಮಡದಿ ಮೈಸೂರು ವಿ.ವಿ. ಕಾನೂನು ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT