ಮಂಡ್ಯ: ‘22 ವರ್ಷಗಳಿಂದ ನಿರಂತರವಾಗಿ ಸೋಲು ಕಂಡಿದ್ದೇನೆ. ನನ್ನ ನಂತರ ಬಂದವರೆಲ್ಲರೂ ಗೆಲುವು ಸಾಧಿಸಿದ್ದಾರೆ. ಸೋಲುಗಳಿಂದ ರಾಜಕೀಯವಾಗಿ ಬಳಲಿದ್ದೇನೆ. ಈ ಚುನಾವಣೆಯಲ್ಲಾದರೂ ನನ್ನನ್ನು ಗೆಲ್ಲಿಸಿ’ ಎಂದು ಲೋಕಸಭೆ ಉಪ
ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಬಿಕ್ಕಿ ಬಿಕ್ಕಿ ಅತ್ತರು.

ನಾಗಮಂಗಲ ಪಟ್ಟಣದಲ್ಲಿ ಸೋಮವಾರ ನಡೆದ ಜೆಡಿಎಸ್– ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು.

‘ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕೋರ್ಟ್‌ನಲ್ಲೇ ಖುಲಾಸೆಯಾಗಿದ್ದೇನೆ ’ ಎಂದರು.

ಮುಖಂಡರ ಗೈರು: ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ, ಉಪ ಚುನಾವಣೆ ಟಿಕೆಟ್ ವಂಚಿತರಾದ ಲಕ್ಷ್ಮಿ ಅಶ್ವಿನ್‌ಗೌಡ ಸಭೆಗೆ ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.