ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಿರುವ ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ, ಶಿರಾಡಿ ಘಾಟ್ ಸುರಂಗ ನಿರ್ಮಾಣ ಹಾಗೂ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಅಳವಡಿಕೆ ಯೋಜನೆಗಳಿಂದ ಕಾಡು ಹಾಗೂ ಕಾಡುಪ್ರಾಣಿಗಳಿಗೆ ದೊಡ್ಡ ಅಪಾಯ ಉಂಟಾಗಲಿದೆ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಎಚ್ಚರಿಸಿದೆ.

ಸಚಿವಾಲಯವು ‘ಹುಲಿ ಗಣತಿ–2022’ ವಿಸ್ತೃತ ವರದಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದೆ.

ಕಾವೇರಿ ವನ್ಯಜೀವಿ ಧಾಮವು ಕಾಡುಪ್ರಾಣಿಗಳಿಗೆ ಪ್ರಮುಖ ಆವಾಸಸ್ಥಾನವಾಗಿದ್ದು, ಗಣತಿಯ ವೇಳೆ ಒಂದು ಹುಲಿ ಕಾಣಸಿಕ್ಕಿದೆ. ಪ್ರಸ್ತಾವಿತ ಮೇಕೆದಾಟು ಅಣೆಕಟ್ಟೆ ಯೋಜನೆಯಿಂದ 50 ಕಿ.ಮೀ.ಯಷ್ಟು ಅರಣ್ಯ ಮುಳುಗಡೆಯಾಗಲಿದೆ. ಈ ಯೋಜನೆಯು ಅಭಯಾರಣ್ಯಕ್ಕೆ ದೊಡ್ಡ ಅಪಾಯ ತಂದೊಡ್ಡಲಿದೆ. ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗವನ್ನು ಮೇಕೆದಾಟು ಸಂಪರ್ಕಿಸುತ್ತದೆ. ಈ ಪ್ರದೇಶದಲ್ಲಿ ಯಾವುದೇ ದೊಡ್ಡ ಪ್ರಮಾಣದ ಅಣೆಕಟ್ಟೆಯು ಕಾವೇರಿ ನದಿಯ ಜಲಚರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಧಾರವಾಡ ಅರಣ್ಯ ವಿಭಾಗವು ಕೃಷಿ ಕ್ಷೇತ್ರಗಳು, ಮಾನವ ವಾಸಸ್ಥಾನಗಳ ನಡುವೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಡುವೆ ಹಾದು ಹೋಗುವ ಸಣ್ಣ ಅರಣ್ಯ ಪ್ರದೇಶಗಳ ತಾಣವಾಗಿದೆ. ಆದರೂ, ಇದು ಅಣಶಿ–ದಾಂಡೇಲಿ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತಾವಿತ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗವು ಈ ಸಂಪರ್ಕವನ್ನು ತೀವ್ರವಾಗಿ ವಿಭಜಿಸುತ್ತದೆ. ಹಾಗಾಗಿ, ಹುಲಿ ಸಂರಕ್ಷಣೆಯ ಉದ್ದೇಶದಿಂದ ರೈಲ್ವೆ ಮಾರ್ಗದ ಕಾರ್ಯಸಾಧ್ಯತೆ ಕುರಿತು ಮರುಪರಿಶೀಲಿಸುವುದು ಉತ್ತಮ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಪತ್ತೆ ನಿರಂತರವಾಗಿ ಕಡಿಮೆಯಾಗಿದೆ. ಆದಾಗ್ಯೂ, ಈ ರಾಷ್ಟ್ರೀಯ ಉದ್ಯಾನವು ಶ್ರೀಮಂತ ಜೀವವೈವಿಧ್ಯ ಮತ್ತು ಸ್ಥಳೀಯತೆ ಹೊಂದಿದೆ. ಆದರೆ, ಕುದುರೆಮುಖ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ದೊಡ್ಡ ಪ್ರಾಣಿಗಳು ಸಾಯುತ್ತಿವೆ. ಪ್ರಸ್ತಾವಿತ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ, ಶಿರಾಡಿ ಘಾಟ್ ಸುರಂಗ ಯೋಜನೆಗಳಿಂದ ಈ ಆವಾಸಸ್ಥಾನಕ್ಕೆ ಭಾರಿ ಅಪಾಯ ಉಂಟಾಗಲಿದೆ. ಜತೆಗೆ, ಕುದುರೆಮುಖ ಹಾಗೂ ಪುಷ್ಪಗಿರಿ ವನ್ಯಜೀವಿಧಾಮಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿವೆ ಎಂದು ಸಚಿವಾಲಯ ಎಚ್ಚರಿಸಿದೆ.

ಕಾಳ್ಗಿಚ್ಚು ಹೆಚ್ಚಳ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಹುಲಿಗಳ ಹೆಚ್ಚಿನ ಸಾಂದ್ರತೆ ಹೊಂದಿದೆ. ಆದರೂ, ಇಲ್ಲಿ ಸಾಕಷ್ಟು ಸಂರಕ್ಷಣಾ ಸವಾಲುಗಳು ಇವೆ. ಇತ್ತೀಚಿನ ವರ್ಷಗಳಲ್ಲಿ ಕಾಳ್ಗಿಚ್ಚು ಪ್ರಕರಣಗಳು ಹೆಚ್ಚುತ್ತಿವೆ. ಬಾಹ್ಯ ಪ್ರದೇಶಗಳಲ್ಲಿ ಮಾನವ–ಹುಲಿ ಸಂಘರ್ಷಗಳು ಜಾಸ್ತಿ ಅಗುತ್ತಿವೆ. ಹುಲಿಗಳ ಆವಾಸಸ್ಥಾನಗಳನ್ನು ಕೆಡಿಸುವ ಹಲವಾರು ಆಕ್ರಮಣಕಾರಿ ಪ್ರಭೇದಗಳ ಪ್ರಸರಣ ಆಗುತ್ತಿದೆ. ಹೀಗಾಗಿ, ಇಲ್ಲಿ ಸಂರಕ್ಷಣೆಯ ಜತೆಗೆ ತುರ್ತು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಸಚಿವಾಲಯ ಕಿವಿಮಾತು ಹೇಳಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 140 ಹುಲಿಗಳು ಇವೆ. 2014 ಹಾಗೂ 2018ರ ಗಣತಿಗೆ ಹೋಲಿಸಿದರೆ ಇಲ್ಲಿ ಹುಲಿಗಳ ಸಂಖ್ಯೆ ಸ್ಥಿರವಾಗಿದೆ. ಸಂರಕ್ಷಿತ ಪ್ರದೇಶದೊಳಗೆ ಬುಡಕಟ್ಟು ಜನರು ನೆಲೆಸಿರುವುದು, ಆಕ್ರಮಣಕಾರಿ ಪ್ರಭೇದಗಳ ಹೆಚ್ಚಳ ಹಾಗೂ ವನ್ಯಜೀವಿ ಆವಾಸಸ್ಥಾನಗಳನ್ನು ಸೀಳಿಕೊಂಡು ಹೆದ್ದಾರಿಗಳು ಹಾದುಹೋಗಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಸಚಿವಾಲಯ ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.