ಬೆಂಗಳೂರು: ಮೆಜೆಸ್ಟಿಕ್‌ನ ಮೆಟ್ರೊ ನಿಲ್ದಾಣಕ್ಕೆ ಸೋಮವಾರ (ಮೇ 6) ಸಂಜೆ ಬಂದು ಹೋಗಿದ್ದ ಶಂಕಿತನ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಅದರ ಬೆನ್ನಲ್ಲೇ, ‘ಮೇ 7ರ ಸಂಜೆ ಮೆಟ್ರೊ ನಿಲ್ದಾಣದಲ್ಲಿ ಹಾದುಹೋದ ನನ್ನನ್ನು ಕೆಲ ವಾಹಿನಿಗಳುಭಯೋತ್ಪಾದಕ ಎಂಬಂತೆ ಬಿಂಬಿಸಿವೆ’ ಎಂದು ವಾಚ್ ವ್ಯಾಪಾರಿಯೊಬ್ಬರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ, ‘ಪೈಜಾಮ ಧರಿಸಿದ್ದ ಇಬ್ಬರು, ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡಿರುವುದಾಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಆ ಇಬ್ಬರಲ್ಲಿ ವಾಚ್ ವ್ಯಾಪಾರಿ ರಿಯಾಜ್ ಅಹಮ್ಮದ್ ಕೂಡ ಒಬ್ಬರು. ಅವರು ಅಮಾಯಕರು. ಇನ್ನೊಬ್ಬ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಶೋಧ ನಡೆಯುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯವನ್ನು ತಪ್ಪಾಗಿ ಗ್ರಹಿಸಿ ರಿಯಾಜ್ ಅವರನ್ನೇ ಉಗ್ರನೆಂದು ಬಿಂಬಿಸಿ ಸುದ್ದಿ ಪ್ರಸಾರ ಮಾಡಲಾಗಿದೆ. ರಿಯಾಜ್ ನೀಡಿರುವ ದೂರನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಉಗ್ರ’ನೆಂದ ವಾಹಿನಿ ವಿರುದ್ಧ ದೂರು: ‘ಪ್ರಜಾವಾಣಿ’ ಜೊತೆ ಮಾತನಾಡಿದ ರಿಯಾಜ್, ‘ಗಡ್ಡ ಬಿಟ್ಟು ಜುಬ್ಬಾ– ಪೈಜಾಮ ಧರಿಸಿದವರೆಲ್ಲ ಉಗ್ರರಾ? ಯಾವುದೋ ವಿಡಿಯೊ ಇಟ್ಟುಕೊಂಡು ಪರಿಶೀಲನೆಯನ್ನೂ ನಡೆಸದೇ ವಾಹಿನಿಗಳು ಸುದ್ದಿ ಪ್ರಸಾರ ಮಾಡಿದ್ದರಿಂದ, ಎಲ್ಲರೂ ನನ್ನನ್ನು ಅನುಮಾನದಿಂದ ನೋಡುವಂತಾಗಿದೆ. ಯಾವಾಗ ಏನಾಗುತ್ತದೆಂದು ಭಯ ಶುರುವಾಗಿದೆ’ ಎಂದು ಅಳಲು ತೋಡಿಕೊಂಡರು.

‘ಗಂಗೊಂಡನಹಳ್ಳಿಯ ನಾನು ಮೆಜೆಸ್ಟಿಕ್ ಬಳಿಯ ಸುರಂಗ ಮಾರ್ಗದಲ್ಲಿ ವಾಚ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಮೇ 7ರಂದು ಕೆಲಸ ಮುಗಿಸಿಕೊಂಡು ಸಂಜೆ 5.45ರ ಸುಮಾರಿಗೆ ಮನೆಗೆ ಹೋಗಲು ಮೆಟ್ರೊ ನಿಲ್ದಾಣಕ್ಕೆ ಹೋಗಿದ್ದೆ. ತಪಾಸಣೆ ನಡೆಸಿದ್ದ ಸಿಬ್ಬಂದಿ, ಜೇಬಿನಲ್ಲಿದ್ದ ವಸ್ತುಗಳನ್ನು ಹೊರಗೆ ತೆಗೆಯುವಂತೆ ಹೇಳಿದ್ದರು. ಕರವಸ್ತ್ರಗಳನ್ನು ತೋರಿಸಿ ನನ್ನ ಪಾಡಿಗೆ ಮೆಟ್ರೊದಲ್ಲಿ ಪ್ರಯಾಣಿಸಿ ಮನೆ ತಲುಪಿದ್ದೆ’ ಎಂದು ರಿಯಾಜ್ ಹೇಳಿದರು.

‘ಬುಧವಾರ ಬೆಳಿಗ್ಗೆ ನನ್ನ ಬಳಿ ಬಂದಿದ್ದ ಪಕ್ಕದ ಮನೆಯ ಸೈಫುಲ್ಲಾ, ‘ನೀವು ಭಯೋತ್ಪಾದಕರಂತೆ. ಈ ಸುದ್ದಿ ವಾಹಿನಿಯಲ್ಲಿ ಫೋಟೊ ಸಮೇತ ಪ್ರಸಾರ ಆಗುತ್ತಿದೆ’ ಎಂದು ವಿಡಿಯೊ ತೋರಿಸಿದ್ದರು. ಅದನ್ನು ನೋಡಿ ಗಾಬರಿಯಾಯಿತು. ಹೀಗಾಗಿ, ನಾನೇ ಠಾಣೆಗೆ ಬಂದು ದೂರು ನೀಡಿದ್ದೇನೆ. ಸುಳ್ಳು ಸುದ್ದಿ ಪ್ರಸಾರ ಮಾಡಿದ ವಾಹಿನಿ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ವಾಹಿನಿಗೆ ನೀಡಿದ ಮೆಟ್ರೊ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ’ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಬೆಂಗಳೂರು ಮೆಟ್ರೊ ನಿಲ್ದಾಣದಲ್ಲಿ ಅನುಮಾನಾಸ್ಪದ ನಡೆ– ಆತ್ಮಾಹುತಿ ಬಾಂಬರ್ ಶಂಕೆ?

ಇನ್ನೊಬ್ಬ ವ್ಯಕ್ತಿಗೆ ಶೋಧ: ’ಜುಬ್ಬಾ ಹಾಗೂ ಕರಿ ಕೋಟು ಧರಿಸಿದ್ದ ಗಡ್ಡಧಾರಿ ಮಧ್ಯವಯಸ್ಕನೊಬ್ಬ ನಿಲ್ದಾಣಕ್ಕೆ ಬಂದು ಹೋದ ದೃಶ್ಯ, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಲ್ಕು ವಿಶೇಷ ತಂಡಗಳು, ಆ ವ್ಯಕ್ತಿಗಾಗಿ ಶೋಧ ನಡೆಸುತ್ತಿವೆ’ ಎಂದು ರವಿ ಚನ್ನಣ್ಣನವರ ತಿಳಿಸಿದರು.

‘ಅಪರಿಚಿತ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದ್ದ ಭದ್ರತಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಲಾಗಿದೆ. ಮೆಟ್ರೊ ನಿಲ್ದಾಣದಲ್ಲೂ ತಪಾಸಣೆ ನಡೆಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ’ ಎಂದು ತಿಳಿಸಿದರು.

ವದಂತಿ ಹಬ್ಬಿಸಬೇಡಿ ಕಮಿಷನರ್ ಮನವಿ
‘ಪೈಜಾಮ ತೊಟ್ಟು, ಗಡ್ಡ ಬಿಟ್ಟು ಓಡಾಡುವ ಎಲ್ಲರನ್ನೂ ಸಂಶಯದಿಂದ ನೋಡಿದರೆ ತಪ್ಪಾಗುತ್ತದೆ. ಕೆಲವರು ಅಂತಹ ಚಿತ್ರಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ನಾಗರಿಕರಲ್ಲಿ ಭಯ ಹುಟ್ಟಿಸುತ್ತಿದ್ದಾರೆ.ಅಂಥ ಸುದ್ದಿಗಳಿಗೆ ಜನ ಕಿವಿಗೊಡಬಾರದು. ವದಂತಿಗಳನ್ನೂ ಹಬ್ಬಿಸಬಾರದು. ನಗರ ಸುರಕ್ಷಿತವಾಗಿದೆ’ ಎಂದುನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದರು.

‘ನಿಷ್ಕ್ರಿಯಗೊಂಡ ಕ್ಯಾಮೆರಾಗಳು’
‘ಮೆಟ್ರೊ ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಮಾತ್ರ ಅಪರಿಚಿತ ವ್ಯಕ್ತಿಯ ದೃಶ್ಯ ಸೆರೆಯಾಗಿದೆ. ಆತ ನಿಲ್ದಾಣದಿಂದ ಹೊರಗೆ ಹೋದ ನಂತರದ ಯಾವುದೇ ದೃಶ್ಯಗಳು ಸಿಕ್ಕಿಲ್ಲ. ಬಸ್ ನಿಲ್ದಾಣದಲ್ಲಿರುವ ಕೆಲ ಕ್ಯಾಮೆರಾಗಳು ನಿಷ್ಕ್ರಿಯಗೊಂಡಿರುವುದು ಅದಕ್ಕೆ ಕಾರಣ’ ಎಂದು ಚನ್ನಣ್ಣನವರ ಮಾಹಿತಿ ನೀಡಿದರು.

‘ನಿಲ್ದಾಣದ ಕೆಲ ಕ್ಯಾಮೆರಾಗಳಲ್ಲಿ ದೃಶ್ಯಗಳು ಅಸ್ಪಷ್ಟವಾಗಿ ಕಾಣುತ್ತವೆ. ಅಗತ್ಯವಿರುವ ಕಡೆಗಳಲ್ಲಿ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸುವಂತೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಅವರು ಸ್ಪಂದಿಸುತ್ತಿಲ್ಲ’ ಎಂದು ಅವರು ಹೇಳಿದರು.

‘ವಾಹಿನಿ ವಿರುದ್ಧ ಸಿ.ಎಂಗೆ ದೂರು’
‘ವ್ಯಾಪಾರಿ ರಿಯಾಜ್ ಅವರನ್ನು ಉಗ್ರನೆಂದು ಬಿಂಬಿಸಿದ ವಾಹಿನಿ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಅವರಿಗೆ ದೂರು ನೀಡಲಾಗುವುದು’ ಎಂದುಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಮುಖಂಡ ಸಿ.ಇ.ರಂಗಸ್ವಾಮಿ ತಿಳಿಸಿದರು.

‘ಎಲ್ಲ ಧರ್ಮ ಹಾಗೂ ಜಾತಿಯ ಸಾವಿರಾರು ಮಂದಿ, ಬೀದಿಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಪ್ರಸಾರವಾದರೆ, ಅಂಥ ವ್ಯಾಪಾರಿಗಳ ಬದುಕೇ ಹಾಳಾಗುತ್ತದೆ. ವಾಹಿನಿಗಳು, ಸುದ್ದಿ ಪ್ರಸಾರ ಮಾಡುವ ಮುನ್ನ ಸಾಕಷ್ಟು ಬಾರಿ ಪರಿಶೀಲನೆ ನಡೆಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.