ಬೆಂಗಳೂರು: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಭಾವಚಿತ್ರ ಅಥವಾ ಹೆಸರಿನ ಜೊತೆ ‘ಮಿಣಿ ಮಿಣಿ’ ಶಬ್ದ ಬಳಸಿ ಯಾವುದೇ ಮಾಧ್ಯಮದ ಮುಖಾಂತರ ಅಪಹಾಸ್ಯ ಮಾಡದಂತೆ ನಗರದಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತ ಸಿವಿಲ್ ದಾವೆಯನ್ನು 20ನೇ ಕೋರ್ಟ್ನ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಶನಿವಾರ ವಿಚಾರಣೆ ನಡೆಸಿದರು. ಕುಮಾರಸ್ವಾಮಿ ಪರ ವಕೀಲ ಎಸ್.ಇಸ್ಮಾಯಿಲ್ ಜಬೀವುಲ್ಲಾ ವಾದ ಮಂಡಿಸಿ, ‘ಅರ್ಜಿದಾರರ ಗೌರವಕ್ಕೆ ಧಕ್ಕೆ ತರಲಾಗುತ್ತಿದ್ದು ತಡೆ ನೀಡಬೇಕು’ ಕೋರಿದರು.

ಇದಕ್ಕೆ ನ್ಯಾಯಾಧೀಶರು, ‘ಪತ್ರಿಕೆ, ಜಾಲತಾಣ, ಟಿ.ವಿ.ಚಾನೆಲ್ ಅಥವಾ ಮತ್ಯಾವುದೇ ಮಾಧ್ಯಮದ ಮುಖಾಂತರ ಮಿಣಿ ಮಿಣಿ ಪದವನ್ನು ಕುಮಾರಸ್ವಾಮಿ ಚಿತ್ರ ಅಥವಾ ವಿಡಿಯೊ ತಳಕು ಹಾಕಿ ಪ್ರಕಟಿಸಬಾರದು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.