ಹುಬ್ಬಳ್ಳಿ: ‘ಬಿಬಿಎಂಪಿ ವ್ಯಾಪ್ತಿಯ 28 ಶಾಸಕರನ್ನು ಹೊರತುಪಡಿಸಿ ರಾಜ್ಯದ ವಿವಿಧೆಡೆಯಲ್ಲಿನ 196 ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ₹7,425 ಕೋಟಿ ವಿಶೇಷ ಅನುದಾನವನ್ನು ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹಂಚಿಕೆ ಮಾಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಾಸಕರಿಗೆ ಬಿಬಿಎಂಪಿಯಿಂದಲೇ ವಿಶೇಷ ಅನುದಾನ ಸಿಗುತ್ತಿದೆ. ಹೀಗಾಗಿ ಈ ವಿಶೇಷ ಅನುದಾನಕ್ಕೆ ಅವರನ್ನು ಪರಿಗಣಿಸಿಲ್ಲ. ವಿರೋಧ ಪಕ್ಷದ 68 ಶಾಸಕರಿಗೆ ತಲಾ ₹25 ಕೋಟಿಯಂತೆ ₹1,700 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ನ 27 ಶಾಸಕರಿಗೆ ತಲಾ ₹25 ಕೋಟಿಯಂತೆ ₹675 ಕೋಟಿ ಅನುದಾನ ನೀಡಲಾಗುವುದು. ಉಳಿದ 101 ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿಯಂತೆ ₹5,050 ಕೋಟಿ ಅನುದಾನ ಹಂಚಿಕೆಯಾಗಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. ಕಾಂಗ್ರೆಸ್ ಶಾಸಕರಿಗೂ ಕಡಿಮೆ ಅನುದಾನ ನೀಡುತ್ತಿದ್ದೇವೆ. ಈ ವಿಶೇಷ ಅನುದಾನಕ್ಕೂ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ್ ರಾಜ್ಯಕ್ಕೆ ಬಂದು ಹೋಗಿರುವುದಕ್ಕೂ ಯಾವ ಸಂಬಂಧವಿಲ್ಲ. ಬಜೆಟ್ ಪೂರ್ವವೇ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡುವ ಕುರಿತು ಚರ್ಚೆಯಾಗಿತ್ತು. ಶಾಸಕರಿಗೆ ತಲಾ ₹50 ಕೋಟಿ ನೀಡಿದರೆ, ₹11,000 ಕೋಟಿ ಬೇಕಾಗುತ್ತದೆ, ಅದು ಆರ್ಥಿಕ ಹೊರೆಯಾಗುತ್ತದೆ ಎಂದು ₹8,000 ಕೋಟಿಗೆ ಮಿತಿಮಾಡಲಾಗಿತ್ತು. ಆ ಕುರಿತು ಮುಖ್ಯಮಂತ್ರಿಗೆ ಇತ್ತೀಚೆಗೆ ನಾನೇ ಪತ್ರ ಬರೆದು ತಿಳಿಸಿದ್ದು, ಈಗ ಅದು ಕಾರ್ಯರೂಪಕ್ಕೆ ಬಂದಿದೆ’ ಎಂದು ಸ್ಪಷ್ಟಪಡಿಸಿದರು.

‘ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೂ ತಲಾ ₹25 ಕೋಟಿ ನೀಡುತ್ತಿದ್ದು, ಅವರಲ್ಲಿ ಯಾರಾದರೂ ಹೆಚ್ಚಿಗೆ ಅನುದಾನ ಬೇಕೆಂದು ಒತ್ತಡ ಹಾಕಿದರೆ, ಮೀಸಲಿಟ್ಟ ₹8,000 ಕೋಟಿಯನ್ನು ಸಹ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

‘2025–26ನೇ ಸಾಲಿನ ಬಜೆಟ್ ಪ್ರಕಾರ ಕೃಷಿಗೆ ₹5,044 ಕೋಟಿ, ಪಶುಸಂಗೋಪನೆಗೆ ₹3342 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜುಗೆ ₹8274 ಕೋಟಿ, ಆರ್ಥಿಕ ₹44,604 ಕೋಟಿ, ಋಣ ಮೇಲುಸ್ತುವಾರಿ ₹75,074 ಕೋಟಿ, ಉನ್ನತ ಶಿಕ್ಷಣ ₹5,858 ಕೋಟಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ₹1,078 ಕೋಟಿ, ಮೂಲಸೌಕರ್ಯ ₹1,033 ಕೋಟಿ ಹೀಗೆ ವಿವಿಧ ಇಲಾಖೆಗೆಗೆ ಒಟ್ಟು ₹4.09 ಸಾವಿರ ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ’ ಎಂದು ವಿವರಿಸಿದರು.

‘ಶಾಸಕರ ಜೊತೆ ಸಿಎಂ ಮುಖಾಮುಖಿ ಚರ್ಚೆ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಸಮಸ್ಯೆ ಕೇಳುತ್ತಿಲ್ಲ, ಭೇಟಿಗೆ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪ ಸ್ವ ಪಕ್ಷದ ಶಾಸಕರಿಂದಲೇ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 30 ಮತ್ತು 31 ಹಾಗೂ ಆಗಸ್ಟ್ 3ರಂದು ಶಾಸಕರ ಜೊತೆ ಮುಖ್ಯಮಂತ್ರಿ ಮುಖಾಮುಖಿಯಾಗಿ ಚರ್ಚಿಸಲಿದ್ದಾರೆ. ಪಕ್ಷದ ಎಲ್ಲ ಶಾಸಕರನ್ನು ಆ ದಿನಗಳಂದು ಬೆಂಗಳೂರಿಗೆ ಆಹ್ವಾನಿಸಿದ್ದು, ಒಬ್ಬೊಬ್ಬರಿಗೆ ಚರ್ಚಿಸಲು ಕನಿಷ್ಠ 10 ನಿಮಿಷ ಅವಕಾಶ ನೀಡಲಿದ್ದಾರೆ’ ಎಂದು ರಾಯರಡ್ಡಿ ತಿಳಿಸಿದರು.

‘ಕೇಂದ್ರ ಸರ್ಕಾರದಿಂದ ಅನ್ಯಾಯ’

‘ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು, ಕೇಂದ್ರ ಸರ್ಕಾರಕ್ಕೆ ನಾವು ಪ್ರತಿವರ್ಷ ₹4.50 ಲಕ್ಷ ಕೋಟಿ ನೀಡುತ್ತಿದ್ದೇವೆ. ಪ್ರತಿಯಾಗಿ ಅದು ₹75 ಸಾವಿರ ಕೋಟಿಯಷ್ಟೇ ಮರಳಿಸುತ್ತಿದೆ. ಅದು ₹1 ಲಕ್ಷ ಕೋಟಿಗೆ ಹೆಚ್ಚಳವಾದರೆ, ರಾಜ್ಯ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಹೀಗೆ ನೀರಾವರಿ ಯೋಜನೆಗೆ ಸಂಬಂಧಿಸಿ ಸಾಕಷ್ಟು ಸಮಸ್ಯೆಗಳಿವೆ. ಕೇಂದ್ರ ಯಾವ ನಾಯಕರೂ ಆ ಕುರಿತು ಮಾತನಾಡುತ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯನ್ನು ವಿರೊಧ ಪಕ್ಷದವರು ಸರಿಪಡಿಸಲು ಮುಂದಾಗಬೇಕು’ ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.