ಸರ್ಕಾರಿ ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆ, ಪಾಲಿಟೆಕ್ನಿಕ್‌ಗಳು, ಎಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಔದ್ಯೋಗಿಕ ಸಂಸ್ಥೆಗಳಿಗೆ ತರಗತಿ ಕೊಠಡಿಗಳು, ಆವರಣ ಗೋಡೆ, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯಗಳ ನಿರ್ಮಾಣ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಉಪಕರಣಗಳನ್ನು ಒದಗಿಸುವುದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು, ರಸ್ತೆ, ಆಟದ ಮೈದಾನ, ಉಪಾಹಾರ ಮಂದಿರಗಳಂಥ ಮೂಲಸೌಕರ್ಯ ಒದಗಿಸಲು ಶಾಸಕರ ಅನುದಾನವನ್ನು ಬಳಸಬಹುದು.