ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,783 ಶಾಲೆಗಳು ವಿದ್ಯುತ್‌ ಮಾರ್ಗದ ಅಪಾಯದಿಂದ ಮುಕ್ತ

4,997 ವಿದ್ಯುತ್‌ ಮಾರ್ಗಗಳ ಬದಲಾವಣೆ ಕಾರ್ಯ
Last Updated 9 ಜನವರಿ 2022, 19:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಶಾಲಾ– ಕಾಲೇಜುಗಳ ಆವರಣದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಇಂಧನ ಇಲಾಖೆ ಆರಂಭಿಸಿದ್ದು, ಈವರೆಗೆ ಒಟ್ಟು 1,783 ಶಾಲೆಗಳ ಆವರಣದಲ್ಲಿದ್ದ ಅಪಾಯಕಾರಿ ವಿದ್ಯುತ್‌ ಮಾರ್ಗಗಳನ್ನು ತೆರವುಗೊಳಿಸಲಾಗಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಇಂಧನ ಸಚಿವ ವಿ.ಸುನಿಲ್‌ ಕುಮಾರ್‌, ಬಾಕಿ ಉಳಿದಿರುವ ಅಪಾಯಕಾರಿ ಮಾರ್ಗಗಳ ಬದಲಾವಣೆಯನ್ನು ಅತಿ ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

2021 ರ ಆಗಸ್ಟ್‌ 15 ರಂದು ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನಡೆಸುವಾಗ ಶಾಲಾ ಆವರಣದಲ್ಲಿ ಹಾದು ಹೋಗಿದ್ದ ಅಪಾಯಕಾರಿ ವಿದ್ಯುತ್‌ ಮಾರ್ಗಕ್ಕೆ ಧ್ವಜ ಕಂಬ ತಗುಲಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದರು. ಹಾಸನದಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಈ ಬಗ್ಗೆ ರಾಜ್ಯಾದ್ಯಂತ ಕಳವಳ ವ್ಯಕ್ತವಾಗಿತ್ತು. ವಿದ್ಯುತ್ ತಂತಿಯನ್ನು ಸ್ಥಳಾಂತರ ಮಾಡುವಂತೆ ಹೈಕೋರ್ಟ್ ಕೂಡ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ರಾಜ್ಯದಲ್ಲಿ ಒಟ್ಟು 6,883 ಇಂತಹ ಅಪಾಯಕಾರಿ ಮಾರ್ಗಗಳು ಶಾಲಾ– ಕಾಲೇಜು ಆವರಣದಲ್ಲಿ ಹಾದು ಹೋಗಿರುವುದನ್ನು ಗುರುತಿಸಲಾಗಿದೆ. ಆದೇಶ ನೀಡಿದ ಮೂರೇ ತಿಂಗಳಲ್ಲಿ 1,783 ಮಾರ್ಗಗಳನ್ನು ಬದಲಿಸಿ ಹೊಸ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನುಳಿದ 4,997 ಮಾರ್ಗಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದ್ದು, ಶೀಫ್ರವೇ ಪೂರ್ಣಗೊಳ್ಳಲಿದೆ. ಇದಕ್ಕಾಗಿ ₹114.50 ಕೋಟಿಯನ್ನು ಇಂಧನ ಇಲಾಖೆ ವೆಚ್ಚ ಮಾಡುತ್ತಿದೆ.

ಬೆಸ್ಕಾಂ ವ್ಯಾಪ್ತಿ: ಅತಿ ಹೆಚ್ಚು ಮಾರ್ಗ

ಬೆಸ್ಕಾಂ ವ್ಯಾಪ್ತಿಯಲ್ಲೇ ಈ ರೀತಿಯ ಅತಿ ಹೆಚ್ಚು ಮಾರ್ಗಗಳು ಇವೆ. ಒಟ್ಟು 2,299 ಸ್ಥಳ ಗುರುತಿಸಲಾಗಿದೆ. ಈ ಪೈಕಿ 157 ಕಡೆ ಹೊಸ ಮಾರ್ಗ ಅಳವಡಿಸಲಾಗಿದ್ದು, 2,147 ಮಾರ್ಗ ಬದಲಾವಣೆ ಪ್ರಗತಿಯಲ್ಲಿದೆ. ಚೆಸ್ಕಾಂ ವ್ಯಾಪ್ತಿಯ 881 ರ ಪೈಕಿ 809, ಮೆಸ್ಕಾಂನ 1,323 ರ ಪೈಕಿ 116, ಹೆಸ್ಕಾಂನ 1,721 ಪೈಕಿ 228 ಹಾಗೂ ಜೆಸ್ಕಾಂ ವ್ಯಾಪ್ತಿಯ 662 ರ ಪೈಕಿ 473 ಅಪಾಯಕಾರಿ ಮಾರ್ಗಗಳನ್ನು ಸರಿಪಡಿಸಲಾಗಿದೆ. 4,997 ಮಾರ್ಗಗಳಿಗೆ ಸದ್ಯದಲ್ಲೇ ಕಾಯಕಲ್ಪ ಸಿಗಲಿದೆ, ಇಂಧನ ಇಲಾಖೆಯ ಈ ಕ್ರಮದಿಂದ ಶಾಲಾ ಆವರಣದಲ್ಲಿ ಆತಂಕ ತಪ್ಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT