‘ಅಂತರ್ಜಲ ಮರುಪೂರಣ: ನೀತಿ ರೂಪಿಸಲು ಚರ್ಚೆ’
‘ನಗರದಲ್ಲಿ 2,395 ಕಡೆ ಮಳೆ ನೀರುಗಾಲುವೆ ಒತ್ತುವರಿ ತೆರವುಗೊಳಿಸಿದ್ದೇವೆ. ಅಂತರ್ಜಲ ಮರುಪೂರಣ ಕೂಡ ಇಲ್ಲಿ ಸಮಸ್ಯೆಯಾಗಿದೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಸಂಪೂರ್ಣ ಕಾಂಕ್ರೀಟ್ ಹಾಕುತ್ತಿದ್ದಾರೆ. ಇದಕ್ಕೆ ನೀತಿ ರೂಪಿಸಲು ಮುಂದಾಗಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
‘ಬೆಂಗಳೂರಿನಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ, ಮಳೆ ಬಂದಾಗ ಅಂಡರ್‌ಪಾಸ್ ಸೇರಿದಂತೆ ಎಲ್ಲೆಡೆ ನೀರು ನಿಲ್ಲುತ್ತದೆ. ಇನ್ನು ಕಾಲುವೆಗಳ ಮೂಲಕ ಮಳೆನೀರು ಇಂಗು ಬಾವಿ ರೂಪಿಸಬೇಕು’ ಎಂದು ಬಿಜೆಪಿಯ ಸಿ.ಎನ್. ಅಶ್ವತ್ಥ್ ನಾರಾಯಣ ಅವರ ಸಲಹೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಮಳೆನೀರು ಇಂಗಿಸುವ ವಿಚಾರವಾಗಿ ಚರ್ಚಿಸಿ ತೀರ್ಮಾನಿಸೋಣ’ ಎಂದು ಹೇಳಿದರು.