ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ‘ಶಕ್ತಿ’ ಯೋಜನೆ ಜಾರಿಗೆ ತಂದಿರುವುದರಿಂದ ಮತ್ತು ಬೇಸಿಗೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಮತ್ತು ಯಾತ್ರಿಗಳ ಸಂಖ್ಯೆ ಅಧಿಕ ಇರುತ್ತದೆ. ದೇವರ ದರ್ಶನಕ್ಕಾಗಿ ಬಿಸಿಲಿನಲ್ಲಿ ಅವರು ಸರದಿ ಸಾಲಿನಲ್ಲಿ ನಿಲ್ಲುವಂತಾಗಬಾರದು. ನೆರಳಿನ ವ್ಯವಸ್ಥೆ ಮಾಡಬೇಕು. ಕುಳಿತು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಬೇಕು. ಸ್ಥಳಾವಕಾಶ ಇರುವಲ್ಲಿ ತಾತ್ಕಾಲಿಕವಾಗಿ ಪೆಂಡಾಲ್‌ಗಳನ್ನು ಅಳವಡಿಸಬೇಕು.