ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಆನೆಗಳ ಬಳಿ ಫೋಟೊ, ರೀಲ್ಸ್ ನಿಷೇಧ: ಅರಣ್ಯ ಸಚಿವ ಈಶ್ವರ ಖಂಡ್ರೆ

Published : 23 ಸೆಪ್ಟೆಂಬರ್ 2024, 14:42 IST
Last Updated : 23 ಸೆಪ್ಟೆಂಬರ್ 2024, 14:42 IST
ಫಾಲೋ ಮಾಡಿ
Comments

ಬೆಂಗಳೂರು: ಮೈಸೂರು ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿರುವ ಸಾಕು ಆನೆಗಳ ಬಳಿ ಪೋಟೊ, ಸೆಲ್ಫಿ, ರೀಲ್ಸ್‌ಗಳಿಗೆ ಅವಕಾಶ ನೀಡಬಾರದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಅರಮನೆಯ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳ ಬಳಿ ಕೆಲವರು ದಂತ, ಸೊಂಡಿಲು ಹಿಡಿದು ಫೋಟೊ ತೆಗೆಸಿಕೊಂಡು, ರೀಲ್ಸ್‌ ಮಾಡಿದ್ದಾರೆ. ಜನರ ಇಂತಹ ನಡವಳಿಕೆಗಳಿಂದ ಆನೆಗಳು ವಿಚಲಿತವಾಗಿ ಅನುಚಿತವಾಗಿ ವರ್ತಿಸುತ್ತಿವೆ, ಪರಸ್ಪರ ಕಾದಾಡಿಕೊಂಡಿವೆ ಎಂದಿದ್ದಾರೆ.

ಫೋಟೊ, ರೀಲ್ಸ್‌ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಶಿಬಿರದಿಂದ ಕರೆತಂದ ಆನೆಗಳನ್ನು ಸುರಕ್ಷಿತವಾಗಿ ವಾಪಸ್‌ ಕಳುಹಿಸುವವರೆಗೂ ಯಾವುದೇ ಅವಘಡಗಳಿಗೆ ಅವಕಾಶ ಆಗದಂತೆ ಎಚ್ಚರವಹಿಸಬೇಕು. ಮುಂದೆ ಇಂತಹ ಘಟನೆಗಳು ನಡೆದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಖಂಡ್ರೆ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT