ಬೆಂಗಳೂರು: ‘ವಾರಕ್ಕೊಮ್ಮೆ ಬಂದು ಏನೇನೋ ಮಾತನಾಡುವ ಎಚ್.ಡಿ.ಕುಮಾರಸ್ವಾಮಿ ಅವರು ನಾಗಮಂಗಲ ಗಲಾಟೆ ಮಾಡಿಸಿರಬಹುದು ಎಂದು ನಾನೂ ಹೇಳಬಹುದಲ್ಲವೇ’ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.
‘ನಾಗಮಂಗಲ ಗಲಾಟೆಗೆ ಕಾಂಗ್ರೆಸ್ ಚಿತಾವಣೆ’ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, ‘ಕುಮಾರಸ್ವಾಮಿ ಏನು ಆರೋಪ ಮಾಡುತ್ತಾರೋ ಅದೇ ರೀತಿ ನಾನೂ ಆರೋಪ ಮಾಡುತ್ತೇನೆ’ ಎಂದರು.
‘ಕಾಂಗ್ರೆಸ್ ಸರ್ಕಾರ ಅತಿಯಾದ ತುಷ್ಟೀಕರಣ ಮಾಡುತ್ತಿದೆ’ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ಯಾರ ತುಷ್ಟೀಕರಣವನ್ನೂ ನಮ್ಮ ಸರ್ಕಾರ ಮಾಡುವುದಿಲ್ಲ. ಅಂಬೇಡ್ಕರ್, ಗಾಂಧೀಜಿ, ಬಸವಣ್ಣ ಅವರ ತತ್ವದಲ್ಲಿ ನಾವು ನಡೆಯುತ್ತಿದ್ದೇವೆ’ ಎಂದರು.