ಬೆಂಗಳೂರು: ರಾಜ್ಯದಾದ್ಯಂತ ಪ್ರತಿದಿನ 96 ಸಾವಿರ ಲೀಟರ್ ನಂದಿನಿ ಸಮೃದ್ಧಿ ಹಾಲನ್ನು (ಫುಲ್ ಕ್ರೀಮ್) ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಮೂಲಗಳು ಹೇಳಿವೆ.

‘ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಭಾಗಗಳಲ್ಲಿ ನಿತ್ಯ 40 ಸಾವಿರ ಲೀಟರ್ ನಂದಿನಿ ಸಮೃದ್ಧಿ ಹಾಲು ಮಾರಾಟ ಮಾಡಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ನಗರದ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಸಮಸ್ಯೆ ಎದುರಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಮೃದ್ಧಿ ಹಾಲನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

ರಾಜ್ಯದ ಇತರೆ ಹಾಲು ಒಕ್ಕೂಟಗಳಿಂದ (ಉತ್ತರ ಕರ್ನಾಟಕ ಸೇರಿದಂತೆ) ಪ್ರತಿದಿನ ಸುಮಾರು 56 ಸಾವಿರ ಲೀಟರ್ಗಳಷ್ಟು ಸಮೃದ್ಧಿ ಹಾಲು ಮಾರಾಟ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟವು ಸುಮಾರು 60 ಲಕ್ಷ ಲೀಟರ್ ಆಗಿದ್ದು, ಅದರಲ್ಲಿ ಸಮೃದ್ಧಿ ಹಾಲಿನ ಪಾಲು ಶೇಕಡ 1.6ರಷ್ಟು ಇದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.