ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್: ಮಾಪ್‌ಅಪ್ ಸುತ್ತಿನ ಸೀಟು ಹಂಚಿಕೆ ಇಂದಿನಿಂದ

Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಪದವಿ‌ ಕೋರ್ಸುಗಳಿಗೆ ಸೆ.14ರಿಂದ 20ರವರೆಗೆ ಆನ್‌ಲೈನ್‌ನಲ್ಲಿ ಮಾಪ್‌ಅಪ್ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ.

ಸೀಟು ಹಂಚಿಕೆಯ ನಂತರ ಉಳಿದಿರುವ 1,213 ಸೀಟುಗಳಿಗೆ ಮಾತ್ರ ಈ ಪ್ರಕ್ರಿಯೆ ನಡೆಯಲಿದೆ. 12 ಸರ್ಕಾರಿ, 446 ಖಾಸಗಿ ಹಾಗೂ 755 ಆಡಳಿತ ಮಂಡಳಿ/ಎನ್‌ಆರ್‌ಐ ಕೋಟಾದ ಸೀಟುಗಳು. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ಜಾಲತಾಣವನ್ನು ನೋಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಎರಡು ಸುತ್ತುಗಳಲ್ಲಿ ಸೀಟು ಪಡೆದವರು ಮಾಪ್‌ಅಪ್‌ ಸುತ್ತಿನ ಸೀಟು ಹಂಚಿಕೆಯಲ್ಲಿ‌ ಭಾಗವಹಿಸುವಂತಿಲ್ಲ. ಹಾಗೆಯೇ, ಪ್ರಾಧಿಕಾರದ ಮೂಲಕ ದಂತ ವೈದ್ಯಕೀಯ ಸೀಟು ಪಡೆದವರು ಮಾಪ್‌ಅಪ್‌ನಲ್ಲಿ ವೈದ್ಯಕೀಯ ಪದವಿ ಸೀಟುಗಳಿಗಾಗಿ ಭಾಗವಹಿಸಬಹುದು. ಮಾಪ್‌ಅಪ್‌ನಲ್ಲಿ ಭಾಗವಹಿಸುವವರು ₹ 1 ಲಕ್ಷ ಮುಂಜಾಗ್ರತಾ ಶುಲ್ಕ ಪಾವತಿಸಬೇಕು. ಮುಂಜಾಗ್ರತಾ ಶುಲ್ಕ ಕಟ್ಟಿದ ನಂತರವೇ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ನಮೂದಿಸಲು ಅವಕಾಶ ಕೊಡಲಾಗುವುದು.

ಸೀಟು ಪಡೆದುಕೊಂಡ ಅಭ್ಯರ್ಥಿಗಳು ನಿಗದಿತ ಕಾಲೇಜಿನಲ್ಲಿ ಪ್ರವೇಶ ಪಡೆಯದಿದ್ದರೆ ಶುಲ್ಕ ಹಿಂದಿರುಗಿಸುವುದಿಲ್ಲ. ಅಂಥವರು ಉಳಿದ ಶುಲ್ಕವನ್ನೂ ಭರಿಸಬೇಕಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT