ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಕ್ಕೆ ಮತ್ತೆ ಮೂರು ವೈದ್ಯಕೀಯ ಕಾಲೇಜು

73ಕ್ಕೇರಿದ ಕಾಲೇಜುಗಳ ಸಂಖ್ಯೆ; ಪ್ರಸಕ್ತ ವರ್ಷ 12,095 ಸೀಟುಗಳು ಲಭ್ಯ
Published 10 ಜುಲೈ 2024, 0:02 IST
Last Updated 10 ಜುಲೈ 2024, 0:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮೂರು ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮತಿ ನೀಡಿದ್ದು, ಕಾಲೇಜುಗಳ ಸಂಖ್ಯೆ 73ಕ್ಕೇರಿದೆ.

ಬೆಂಗಳೂರಿನ ಬಿಜಿಎಸ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಎಲೆಕ್ಟ್ರಾನಿಕ್‌ ಸಿಟಿಯ ಪಿಇಎಸ್‌ ವಿಶ್ವವಿದ್ಯಾನಿಲಯ  ಮತ್ತು ಬಾಗಲಕೋಟೆ ಎಸ್‍ಆರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಿಗೆ ಮಾನ್ಯತೆ ದೊರೆತಿದ್ದು, ಈ ಮೂರೂ ವೈದ್ಯಕೀಯ ಕಾಲೇಜುಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿವೆ.

ಬಿಜಿಎಸ್‍ಗೆ 150, ಪಿಇಎಸ್‍ಗೆ ಹಾಗೂ ಬಾಗಲಕೋಟೆ ಎಸ್‍ಆರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ತಲಾ 100 ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ. ಪ್ರಸ್ತುತ ರಾಜ್ಯದಲ್ಲಿ 11,745 ವೈದ್ಯಕೀಯ ಸೀಟುಗಳು ಲಭ್ಯವಿದ್ದವು. 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಸೀಟುಗಳ ಸಂಖ್ಯೆ 12,095 ಇರುತ್ತದೆ.

ರಾಮನಗರ ಮತ್ತು ಕನಕಪುರಕ್ಕೆ ದೊರಕದ ಅನುಮತಿ: 

ಐದು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಎನ್‍ಎಂಸಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯ ಬೇಡಿಕೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮೋದನೆ ನೀಡಿಲ್ಲ.

ಎನ್‌ಎಂಸಿ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಅಧ್ಯಾಪಕರನ್ನು ಹೊಂದಿರುವುದು ಕಡ್ಡಾಯ. ಅವರ ಆಧಾರ್‌ ಆಧಾರಿತ ಬಯೋಮೆಟ್ರಿಕ್ ಹಾಜರಾತಿ, ನಿಗದಿಪಡಿಸಿದ ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ಕೆಲ ಮಾನದಂಡಗಳನ್ನು ಪಾಲಿಸದ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT