‘ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸುತ್ತೀರಾ? ಆ ಟಿಪ್ಪು ಕೊಂದ ನಮ್ಮ ಉರಿಗೌಡ, ನಂಜೇಗೌಡರ ಬಳಿಯೂ ಖಡ್ಗ ಇತ್ತು. ಹಾಗೇ ಹನುಮನ ಗದೆ, ಕೃಷ್ಣನ ಸುದರ್ಶನ ಚಕ್ರ, ಶಿವನ ತ್ರಿಶೂಲ ಹೊರ ತೆಗೆಯಬೇಕಾಗುತ್ತದೆ’ ಎಂದು ಮಾಜಿ ಸಚಿವ ಸಿ.ಟಿ.ರವಿ ಎಚ್ಚರಿಕೆ ನೀಡಿದರು. ಕೋಲಾರದಲ್ಲಿ ಮಂಗಳವಾರ ಮಾತನಾಡಿದ ಅವರು, ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಕೊಡದಂತೆ ತಡೆಹಿಡಿಯಲು ಪ್ರಯತ್ನ ನಡೆದಿತ್ತು. ಕೋಲಾರ ಏನು ಪಾಕಿಸ್ತಾನದಲ್ಲಿಯೇ? ಜಿಲ್ಲಾಧಿಕಾರಿ ಅಕ್ರಂ ಪಾಷ ನವಾಜ್ ಷರೀಫ್ ತಮ್ಮನೋ, ಮಗನೋ? ನಾನು ಕೋಲಾರಕ್ಕೆ ಬರಬಾರದೆಂದು ಹೇಳಲು ಇವನ್ಯಾರು? ನಾನು ಬಾಂಬ್ ಹಾಕಿಲ್ಲ. ತಾಲಿಬಾನಿಯೂ ಅಲ್ಲ’ ಎಂದು ಹರಿಹಾಯ್ದರು. ಇದರೊಂದಿಗೆ, ದಿನದ ಪ್ರಮುಖ ವಿದ್ಯಮಾನಗಳ ವಿವರ ಈ ವಿಡಿಯೊದಲ್ಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.