ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಪತ್ರಿಕೆ ವಿತರಕರಿಗೆ ವಿಮೆ: ನೋಂದಣಿಗೆ ಸೂಚನೆ

Published 20 ಡಿಸೆಂಬರ್ 2023, 16:17 IST
Last Updated 20 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗೆ ‘ಇ–ಶ್ರಮ್‌’ ಪೋರ್ಟಲ್‌ ಹಾಗೂ ಗಿಗ್ ಕಾರ್ಮಿಕರ ಜೀವ ವಿಮೆ ಮತ್ತು ಅಪಘಾತ ಪರಿಹಾರ ಯೋಜನೆಗೆ ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಲು ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ’ ಎಂದು ಕಾರ್ಮಿಕ ಇಲಾಖೆಯ ಆಯುಕ್ತ ಎಚ್‌.ಎನ್‌. ಗೋಪಾಲಕೃಷ್ಣ ತಿಳಿಸಿದ್ದಾರೆ.

‘ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದ ಈ ಯೋಜನೆಗಳಡಿ ಹೆಚ್ಚಿನ ಸಂಖ್ಯೆಯಲ್ಲಿ ಗಿಗ್ ಮತ್ತು ದಿನಪತ್ರಿಕೆ ವಿತರಿಸುವ ಕಾರ್ಮಿಕರನ್ನು ನೋಂದಾಯಿಸಲು ಎಲ್ಲ ಜಿಲ್ಲೆಗಳ ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರು ಮುಂದಾಗಬೇಕು’ ಎಂದು ಅವರು ಸೂಚನೆ ನೀಡಿದ್ದಾರೆ.

ಈ ಯೋಜನೆಗಳಡಿ ಗಿಗ್ ಕಾರ್ಮಿಕರಿಗೆ ₹ 2 ಲಕ್ಷ ಜೀವ ವಿಮೆ ಸೌಲಭ್ಯ ಮತ್ತು ₹ 2 ಲಕ್ಷ ಅಪಘಾತ ವಿಮಾ ಸೌಲಭ್ಯ ಸೇರಿ ಒಟ್ಟು ₹ 4 ಲಕ್ಷದ ವಿಮೆ ಸೌಲಭ್ಯ ಸಿಗಲಿದೆ. ದಿನಪತ್ರಿಕೆ ವಿತರಿಸುವ ಕಾರ್ಮಿಕರಿಗೆ  ₹ 2 ಲಕ್ಷ ಅಪಘಾತ ಪರಿಹಾರ ಸೌಲಭ್ಯ ಮತ್ತು ₹ 1 ಲಕ್ಷದವರೆಗೆ ವೈದ್ಯಕೀಯ ಸೌಲಭ್ಯ ಸಿಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT