ಮಂಗಳೂರು/ ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐವರು ಶಂಕಿತ ವ್ಯಕ್ತಿಗಳ ಮನೆಗಳಿಗೆ ಭಾನುವಾರ ಎನ್ಐಎ ಪೊಲೀಸರ ತಂಡ ಭೇಟಿ ನೀಡಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.
‘ಬಂಟ್ವಾಳ ತಾಲ್ಲೂಕಿನ ನಂದಾವರ ಸಮೀಪದ ಬೋಗೊಡಿ ನಿವಾಸಿ ಇಬ್ರಾಹಿಂ ನಂದಾವರ ಮತ್ತು ಕುಂಪಣಮಜಲು ನಿವಾಸಿ, ಪ್ರಸ್ತುತ ವಳಚ್ಚಿಲ್‌ನಲ್ಲಿ ವಾಸವಾಗಿರುವ ಮುಷ್ತಾಕ್ ಎಂಬುವರ ಮನೆಗಳಲ್ಲೂ ಶೋಧ ನಡೆಸಿದೆ. ಕೇರಳದಲ್ಲಿ ಧಾರ್ಮಿಕ ಶಿಕ್ಷಣ ಶಿಕ್ಷಕನಾಗಿರುವ ಇಬ್ರಾಹಿಂ ಪಿಎಫ್ಐ ನಿಷೇಧದ ಬಳಿಕ ತಲೆ ಮರೆಸಿಕೊಂಡಿದ್ದ. ಎನ್‌ಐಎ ಪೊಲೀಸರು ಮನೆಗೆ ಭೇಟಿ ನೀಡಿದಾಗಲೂ ಆತ ಮನೆಯಲ್ಲಿರಲಿಲ್ಲ. ಉಳ್ಳಾಲದ ಕಿನ್ಯದ ಮನೆಯೊಂದಕ್ಕೂ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಭಾರತ ನೀಡಿದ್ದ 166 ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 18 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.55 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 85 ರನ್ ಸಿಡಿಸಿದ ಬ್ರ್ಯಾಂಡನ್ ಕಿಂಗ್, 35 ಎಸೆತಗಳಲ್ಲಿ 47 ರನ್ ಸಿಡಿಸಿದ ನಿಕೋಲಸ್ ಪೂರನ್ ಗೆಲುವಿನ ರೂವಾರಿಗಳಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.