ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆದ್ದಾರಿ ಯೋಜನೆಗಳಿಗೆ ₹1 ಲಕ್ಷ ಕೋಟಿ ಅನುದಾನ ಭರವಸೆ: ಸಚಿವ ಜಿ. ಪರಮೇಶ್ವರ

Published 1 ಜುಲೈ 2024, 0:26 IST
Last Updated 1 ಜುಲೈ 2024, 0:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಹೆದ್ದಾರಿ, ಸಂಪರ್ಕ ಜಾಲ ವೃದ್ಧಿ ಯೋಜನೆಗಳಿಗೆ ₹ 1 ಲಕ್ಷ ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ  ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವರ ನಿಯೋಗ ಕೈಗೊಂಡಿದ್ದ ದೆಹಲಿ ಪ್ರವಾಸದ ಬಗ್ಗೆ ಭಾನುವಾರ ‌ಪ್ರತಿಕ್ರಿಯಿಸಿದ ಅವರು, ‘ರಾಜ್ಯದ ಹೆದ್ದಾರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಕರಿಸುವಂತೆ ವಿನಂತಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಹೆಚ್ಚು ಅನುದಾನ ನೀಡುವ ಭರವಸೆ ನೀಡಿದರು’ ಎಂದರು.

‘ರಾಜ್ಯದ ಸಂಸದರೊಂದಿಗೆ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗಿದೆ. ಈ ಹೊಸ ಸಂಪ್ರದಾಯ ಮುಂದುವರಿಯಬೇಕು. ಪ್ರತಿ ಅಧಿವೇಶನ ನಡೆದಾಗಲೂ ಈ ರೀತಿಯ ಸಭೆ ನಡೆಸುವಂತೆ ಸಂಸದರು ತಿಳಿಸಿದ್ದಾರೆ’ ಎಂದರು.

‘ಪೊಲೀಸ್‌ ಇಲಾಖೆಗೆ ಸಂಬಂಧಪಟ್ಟ ಕೆಲವು ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. ‘ನಿರ್ಭಯಾ’ ಯೋಜನೆಯಡಿ ಪ್ರತಿ ಪಟ್ಟಣಕ್ಕೆ ತಲಾ ₹ 200 ಕೋಟಿ ಅನುದಾನ ಕೋರಲಾಗಿದೆ.‌ ಆಧುನಿಕ ಬಾಡಿ ಕ್ಯಾಮೆರಾಗಳನ್ನು ಪೊಲೀಸರಿಗೆ ವಿತರಿಸಲು ಅನುದಾನ ಕೇಳಲಾಗಿದೆ’ ಎಂದರು.

‘ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದಾಗಿ ಯಾವುದೇ ಪ್ರಸ್ತಾಪ ಮಾಡಲಿಲ್ಲ. ನಮ್ಮ ಪ್ರಸ್ತಾವಗಳನ್ನು ಕೇಂದ್ರದ ಮುಂದಿಟ್ಟಿದ್ದೇವೆ’ ಎಂದೂ ಪರಮೇಶ್ವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT