ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಅನುದಾನ: ಸಿದ್ದರಾಮಯ್ಯ ಪತ್ರ

Last Updated 19 ಡಿಸೆಂಬರ್ 2020, 16:55 IST
ಅಕ್ಷರ ಗಾತ್ರ

ಬೆಂಗಳೂರು: ‘ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ವರ್ಷ ₹25 ಲಕ್ಷದಷ್ಟು ಅತ್ಯಂತ ಕಡಿಮೆ ಅನುದಾನ ಬಿಡುಗಡೆ ಮಾಡಿ ರುವುದು ಅತ್ಯಂತ ನಾಚಿಕೆಗೇಡು ಹಾಗೂ ದುರಂತದ ಸಂಗತಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ಹಿಂದೆಲ್ಲ ವಾರ್ಷಿಕ ₹4 ಕೋಟಿ ಯಿಂದ ₹5 ಕೋಟಿ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಅನುದಾನವನ್ನು ₹50 ಲಕ್ಷಕ್ಕೆ ಇಳಿಸಲಾಗಿದ್ದು, ₹25 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಕನ್ನಡಕ್ಕಾಗಿ ದುಡಿಯುತ್ತಿರುವ, ಕನ್ನಡದ ಜ್ಞಾನವನ್ನು ವಿಸ್ತರಿಸುವ ಸಂಸ್ಥೆಗಳ ಬಗ್ಗೆ ನಿರ್ಲಕ್ಷ್ಯ ತೋರಿ ರುವುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ’ ಎಂದು ಪ್ರಶ್ನಿಸಿದ್ದಾರೆ.

’ರಾಶಿರಾಶಿಯಾಗಿ ಶಾಸಕರನ್ನು, ಪಕ್ಷದ ಹಿಂಬಾಲಕ ರನ್ನು ನಿಗಮ–ಮಂಡಳಿಗೆ ಅಧ್ಯಕ್ಷರಾಗಿ ನೇಮಿಸಿ ಸಂಪುಟದರ್ಜೆ ಸ್ಥಾನ ನೀಡಿ ನೂರಾರು ಕೋಟಿ ದುಂದು ಮಾಡಲಾಗುತ್ತಿದೆ. ಹಸಿದವನಿಗೆ ಅನ್ನ ನೀಡಲು, ಭಾಷೆ ಕಟ್ಟುವ ಕೆಲಸಕ್ಕೆ ನೀಡಲು ಮಾತ್ರ ಹಣವಿಲ್ಲ. ಇಂತಹ ನಡಾ ವಳಿಗಳು ನಾಡದ್ರೋಹಿಗಳ ವರ್ತನೆಗಳಾಗುತ್ತವೆ’ ಎಂದವರು ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT