‘ಸಿದ್ದರಾಮಯ್ಯ ಅವರ ಪರ ವರುಣಾದಲ್ಲಿ ಪ್ರಚಾರ ಮಾಡುವಾಗಲೇ, ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದೆ. ಈಗ ಅದು ನಿಜವಾಗಿದ್ದು, ಖುಷಿಯಾಗಿದೆ. ಸಿದ್ದರಾಮಯ್ಯ ಅವರು ಐದು ಗ್ಯಾರಂಟಿಗಳನ್ನು ಈಡೇರಿಸುತ್ತಾರೆ. ಉತ್ತಮ ಆಡಳಿತ ಕೊಡುತ್ತಾರೆ. ಇನ್ನು, ಐದು ವರ್ಷ ರಾಜ್ಯದಲ್ಲಿ ಸಮಸ್ಯೆಗಳು ಇರಲ್ಲ’ ಎಂದು ನಟ ದುನಿಯಾ ವಿಜಯ್ ವಿಶ್ವಾಸ ವ್ಯಕ್ತಪಡಿಸಿದರು.