ಅಭಿವೃದ್ಧಿ ಹೆಸರಲ್ಲಿ ವಾಣಿಜ್ಯ ಚಟುವಟಿಕೆ
‘ರಾಜ್ಯ ಸರ್ಕಾರ ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್ (ಮನೋರಂಜನೆ ಉದ್ಯಾನ) ನಿರ್ಮಾಣದ ಉದ್ದೇಶಕ್ಕಾಗಿ 2024ರ ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ ಎರಡು ಬಾರಿ ಟೆಂಡರ್ ಆಹ್ವಾನಿಸಿತ್ತು. ಆದರೆ ಇದಕ್ಕೆ ರೈತ ಸಂಘ ಮತ್ತು ಸ್ಥಳೀಯ ಕೃಷಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈಗ ಕೆಆರ್‌ಎಸ್ ಅಣೆಕಟ್ಟೆ ಅಧೀನದಲ್ಲಿರುವ ಕಾವೇರಿ ಬೃಂದಾವನ ಉದ್ಯಾನವನದ ಅಭಿವೃದ್ಧಿ ಉಸ್ತುವಾರಿ ಯಾ ನಿರ್ವಹಣೆ ಹೆಸರಿನಲ್ಲಿ 2025ರ ಮಾರ್ಚ್ 15ರಂದು ₹2615.96 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಮನವಿ ಏನು?: ‘ಮಂಡ್ಯ ಜಿಲ್ಲೆ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಅವರು 2024ರ ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿಯವರಿಗೆ ನೀಡಿರುವ ಮನವಿಯ ಅನುಸಾರ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.