ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈವ್ ಬ್ಯಾಂಡ್‌ಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್‌ ಕಡ್ಡಾಯ: ಹೈಕೋರ್ಟ್‌

Last Updated 2 ಜುಲೈ 2018, 8:34 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಭೋಗ ಪ್ರಮಾಣ ಪತ್ರ (ಆಕ್ಯುಪೆನ್ಸಿ ಸರ್ಟಿಫಿಕೇಟ್) ಇಲ್ಲದ ಲೈವ್ ಬ್ಯಾಂಡ್‌ಕಾರ್ಯನಿರ್ವಹಣೆಗೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ಲೈವ್ ಬ್ಯಾಂಡ್‌ಕಾರ್ಯನಿರ್ವಹಣೆಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್‌ ಕಡ್ಡಾಯ. ಆ ಪ್ರಮಾಣ ಪತ್ರ ಪಡೆದ ಬಳಿಕವಷ್ಟೇ ಲೈವ್ ಬ್ಯಾಂಡ್‌ಕಾರ್ಯ ನಿರ್ವಹಿಸಬೇಕು ಎಂದು ಏಕಸದಸ್ಯ ನ್ಯಾಯಪೀಠ ಹೇಳಿದೆ‌.

ಈ ಕುರಿತಂತೆ ನಗರ ಪೊಲೀಸ್ ಕಮಿಷನರ್ ನೀಡಿದ್ದ ನೋಟಿಸ್ ಪ್ರಶ್ನಿಸಿದ ಅರ್ಜಿಗಳ ಮೇಲಿನ ಆದೇಶವನ್ನು ಕಾಯ್ದಿರಿಸಿದ ಆದೇಶವನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ. ಅಕ್ಯುಪೆನ್ಸಿ ಸರ್ಟಿಫಿಕೇಟ್ ಪಡೆದ ಲೈವ್ ಬ್ಯಾಂಡ್ ಕಾರ್ಯನಿರ್ವಹಣೆಗೆ ನ್ಯಾಯಪೀಠ ಹಸಿರು ನಿಶಾನೆ ತೋರಿದೆ.

1977 ಮತ್ತು ಅದಕ್ಕೂ ಹಿಂದಿನ ಹಳೆಯ ಕಟ್ಟಡಗಳಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡುವುದು ಸಂಬಂಧ ಪಟ್ಟ ಇಲಾಖೆಗೆ ಬಿಟ್ಟದ್ದು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

'ಕಟ್ಟಡದ ಪ್ರತಿ ಅಂತಸ್ತಿಗೂ ಅ ಸರ್ಟಿಫಿಕೇಟ್ ಕಡ್ಡಾಯ' ಎಂದು ತಿಳಿಸಿದ್ದು,ಅಕ್ಯುಪೆನ್ಸಿ ಸರ್ಟಿಫಿಕೇಟ್ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಇತ್ಯರ್ಥಕ್ಕೆ ಸಮಯ ನಿಗದಿಪಡಿಸುವಂತೆ ನಿರ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT